ಬಾಂಡ್ ಆದೇಶ: ತಿಮರೋಡಿ ಅರ್ಜಿ ವಜಾ
ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ತಹಶೀಲ್ದಾರ್‌ರ ಮಧ್ಯಂತರ ಬಾಂಡ್ ಆದೇಶವನ್ನು ಪ್ರಶ್ನಿಸಿದ ಅರ್ಜಿಯನ್ನು ದ.ಕ. ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಪದೇ ಪದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ದಂಡಾಧಿಕಾರಿ(ತಹಶೀಲ್ದಾರ್) ಬಾಂಡ್ ನೀಡಲು ಸೂಚಿಸಿದ್ದರು
ಮೇ 18ರಂದು ಭದ್ರತಾ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿಗೆ ಬಾಂಡ್ ಕೊಡಲು ಸೂಚಿಸಲಾಗಿತ್ತು. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗದಂತೆ 50 ಸಾವಿರ ರು.ಗಳ ಮಧ್ಯಂತರ ಬಾಂಡ್‌ನ್ನು ದಂಡಾಧಿಕಾರಿ ವಿಚಾರಣೆ ಮುಗಿಯುವ ವರೆಗೆ ಮುಚ್ಚಳಿಕೆ ಪತ್ರ ಬರೆಯಿಸಿ ಎಚ್ಚರಿಕೆ ನೀಡಿದ್ದರು.
ಈ ಮಧ್ಯಂತರ ಬಾಂಡ್ ಪ್ರಶ್ನಿಸಿ ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ಜೂನ್ 20 ರಂದು ಕ್ರಿಮಿನಲ್ ರಿವಿಜನ್ ಪಿಟಿಷನ್ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಗುರುವಾರ ಈ ಅರ್ಜಿಯ ವಾದ-ಪ್ರತಿವಾದ ಅಲಿಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು.