ಅ.19 ರಂದು ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ
ಮಂಗಳೂರು: ಕರಾವಳಿ ಸೇವಾ ಪ್ರತಿಷ್ಠಾನ (ರಿ) ಸುರತ್ಕಲ್-ಮಂಗಳೂರು ಇದರ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಅ.19 ರಂದು ಬೆಳಗ್ಗೆ 8.30 ರಿಂದ ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಕೆಯಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಮಕ್ಕಳ ಕುಣಿತ ಭಜನೆ, ಕುಣಿತ ಭಜನೆ ಮುಕ್ತ, ಭಜನಾ ಸ್ಪರ್ಧೆ-ಮುಕ್ತ ಸಾಂಪ್ರಾದಾಯಿಕ ಭಜನಾ ಸ್ಪರ್ಧೆ ನಡೆಯಲಿದೆ.
ಕುಣಿತ ಭಜನಾ ಸ್ಪರ್ಧೆಯ ನಿಯಮಗಳು:
ಮಕ್ಕಳ ವಿಭಾಗದ ಸ್ಪರ್ಧೆ (16 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ), ಮುಕ್ತ ವಿಭಾಗದ ಸ್ಪರ್ಧೆ (16 ವರ್ಷಕ್ಕಿಂತ ಮೇಲ್ಪಟ್ಟ ಪುರುಷ/ ಮಹಿಳೆಯರು). ಈ ಸ್ಪರ್ಧೆಯಲ್ಲಿ ಕನಿಷ್ಠ 10 ಗರಿಷ್ಠ 16 ಮಂದಿ ಭಾಗವಹಿಸಬಹುದು (ಹಿಮ್ಮೇಳ ಸೇರಿ). ಮಕ್ಕಳ ವಿಭಾಗದಲ್ಲಿ ಭಾಗವಹಿಸುವ ತಂಡಗಳಿಗೆ ಬೆಳಗ್ಗೆ 8.30ಕ್ಕೆ ಕ್ರಮಸಂಖ್ಯೆ ವಿತರಣೆ ಮಾಡಲಾಗುವುದು. ಈ ಸ್ಪರ್ಧೆಯಲ್ಲಿ ದಾಸ ಸಾಹಿತ್ಯ ಕಡ್ಡಾಯವಲ್ಲ. ಪ್ರತಿ ತಂಡಕ್ಕೆ 12 ನಿಮಿಷದ ಕಾಲಾವಕಾಶ ನೀಡಲಾಗುವುದು.
ತೀರ್ಪುಗಾರಿಕೆಯಲ್ಲಿ ಭಜನಾ ಪ್ರಾರಂಭ, ಸಮವಸ್ತ್ರ, ಭಜನಾ ಹಾಡಿನ ಆಯ್ಕೆ, ರಾಗ, ತಾಳ, ಲಯ, ಕುಣಿತದ ಸಂಯೋಜನೆ, ತಂಡದ ಹೊಂದಾಣಿಕೆ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯವನ್ನು ಗಮನಿಸಿ ತಂಡಕ್ಕೆ ಅಂಕವನ್ನು ನೀಡಲಾಗುವುದು.
ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಯಾಣ ಭತ್ಯೆಯಾಗಿ ಗೌರವ ಧನ ನೀಡಲಾಗುವುದು. (ಬಹುಮಾನ ಪಡೆದ ತಂಡಗಳನ್ನು ಹೊರತುಪಡಿಸಿ), ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾದದ್ದು.
ಸಾಂಪ್ರದಾಯಿಕ ಭಜನಾ ಸ್ಪರ್ಧೆಯ ನಿಯಮಗಳು:
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಸಮವಸ್ತ್ರ ಕಡ್ಡಾಯ., ಭಜನಾ ತಂಡಗಳು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು, ಯಾವುದೇ ಪ್ರಾದೇಶಿಕ ಮತ್ತು ವಯೋಮಿತಿ ನಿಬರ್ಂಧ ಅಥವಾ ಲಿಂಗಬೇಧ ಇರುವುದಿಲ್ಲ. ಕುಣಿತ ಭಜನೆಗೆ ಅವಕಾಶವಿಲ್ಲ. ತಂಡದಲ್ಲಿ ಗರಿಷ್ಠ 15 ಮಂದಿಗೆ (ಹಿಮ್ಮೇಳ ಸೇರಿ) ಅವಕಾಶ.
ತಂಡಕ್ಕೆ 20 ನಿಮಿಷಗಳ ಕಾಲಾವಕಾಶವಿದ್ದು, 20 ನಿಮಿಷ ಮೀರಿದಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುವುದು. ಯಾವುದೇ ಮಾದರಿಯ ಎಲೆಕ್ಟ್ರಾನಿಕ್ ವಾದನಗಳನ್ನು ಬಳಸುವಂತಿಲ್ಲ, ಎಲ್ಲಾ ಪರಿಕರಗಳನ್ನು ತಂಡಗಳೇ ತರಬೇಕು. ಭಾಗವಹಿಸುವ ತಂಡಗಳು ಮಧ್ಯಾಹ್ನ 3 ಗಂಟೆಯೊಳಗೆ ಉಪಸ್ಥಿತರಿರಬೇಕು, 3 ಗಂಟೆಗೆ ಕ್ರಮ ಸಂಖ್ಯೆ ವಿತರಿಸಲಾಗುವುದು. ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.
ಕುಣಿತ ಭಜನಾ ಸ್ಪರ್ಧೆಯಲ್ಲಿ ಪ್ರಥಮ: 15,555 ರೂ. ಮತ್ತು ಪಾರಿತೋಷಕ, ದ್ವಿತೀಯ: 11,111 ರೂ. ಮತ್ತು ಪಾರಿತೋಷಕ, ತೃತೀಯ: 7,777 ಮತ್ತು ಪಾರಿತೋಷಕ ಬಹುಮಾನ.
ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ಪ್ರಥಮ: 25,000 ರೂ. ಮತ್ತು ಪಾರಿತೋಷಕ, ದ್ವಿತೀಯ: 20,000 ರೂ. ಮತ್ತು ಪಾರಿತೋಷಕ, ತೃತೀಯ: 15,000 ರೂ. ಮತ್ತು ಪಾರಿತೋಷಕ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.