‘ಐ ಲವ್ ಮಹಮ್ಮದ್’ ಅಭಿಯಾನದಿಂದ ಹಿಂದೂಗಳ ಮೇಲೆ ಹಿಂಸಾತ್ಮಕ ದಾಳಿ: ಕಠಿಣ ಕ್ರಮಕ್ಕೆ ಮನವಿ

‘ಐ ಲವ್ ಮಹಮ್ಮದ್’ ಅಭಿಯಾನದಿಂದ ಹಿಂದೂಗಳ ಮೇಲೆ ಹಿಂಸಾತ್ಮಕ ದಾಳಿ: ಕಠಿಣ ಕ್ರಮಕ್ಕೆ ಮನವಿ


ಮಂಗಳೂರು: ಇಂದು ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೆಲವು ಮುಸಲ್ಮಾನ ಯುವಕರು ‘ಐ ಲವ್ ಮೊಹಮ್ಮದ್’ ಅಭಿಯಾನವನ್ನು ಪ್ರಾರಂಭಿಸಿ ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ. 

ದಾವಣಗೆರೆಯಲ್ಲಿ ಸೆ.24 ರಂದು ರಾತ್ರಿ ಮುಸ್ಲಿಮರು ಹಿಂದೂಗಳ ಮನೆಗಳ ಮೇಲೆ ಬಲವಂತವಾಗಿ ‘ಐ ಲವ್ ಮೊಹಮ್ಮದ್’ ಫಲಕಗಳನ್ನು ಹಾಕಿದರು. ಇದನ್ನು ವಿರೋಧಿಸಿದ ಹಿಂದೂ ಮನೆಗಳ ಮೇಲೆ 200-300 ಮತಾಂಧರ ಗುಂಪು ಕಲ್ಲು ತೂರಾಟ ಮಾಡಿದಲ್ಲದೇ, ಹಿಂದೂ ಮನೆಗೆ ನುಗ್ಗಿ ಹಿಂದೂ ಮಹಿಳೆಯರು ಮತ್ತು ಪುರುಷರನ್ನು ಥಳಿಸಲಾಯಿತು. 

ಅದೇ ರೀತಿಯಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ರಾತ್ರಿ ಮುಸ್ಲಿಮರ ಗುಂಪು ಗರಬಾ ಆಡುತ್ತಿದ್ದ ಹಿಂದೂಗಳ ಮೇಲೆ ದಾಳಿ ಮಾಡಿತು. ಈ ದಾಳಿಯಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವುದು ಮತ್ತು ಸಾರ್ವಜನಿಕ ಆಸ್ತಿಗೆ ದೊಡ್ಡ ಪ್ರಮಾಣದ ಹಾನಿ ಉಂಟುಮಾಡಲಾಯಿತು. ದಾಳಿಕೋರರು ಪೊಲೀಸ್ ವಾಹನಗಳು ಸೇರಿದಂತೆ ಎಂಟುಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದರು. 

ಈ ದಾಳಿಗಳು ಕೇವಲ ಗುಜರಾತ್ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉತ್ತರ ಪ್ರದೇಶದ ಕಾನ್ಪುರ, ಬರೇಲಿದಿಂದ ಪ್ರಾರಂಭವಾದ ಈ ವಿವಾದ ಈಗ ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೂ ಹರಡುತ್ತಿದೆ. ಈ ಘಟನೆಗಳಿಂದಾಗಿ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ. ಇದು ಒಂದು ಪೂರ್ವಯೋಜಿತ ಪಿತೂರಿಯ ಭಾಗವೆಂದು ಕಂಡುಬರುತ್ತದೆ. 

ಪ್ರತಿ ವರ್ಷ ಹಿಂದೂ ಹೊಸ ವರ್ಷ, ಶ್ರೀರಾಮನವಮಿ, ಹನುಮಾನ್ ಜಯಂತಿ, ಹೋಳಿ, ರಂಗಪಂಚಮಿ, ಗಣೇಶೋತ್ಸವ, ದಸರಾ ಅಥವಾ ದೀಪಾವಳಿಯಂತಹ ಹಿಂದೂ ಹಬ್ಬಗಳ ಸಮಯದಲ್ಲಿ, ಮತಾಂಧ ಮುಸಲ್ಮಾನರು ಏನಾದರೂ ಕಾರಣ ನೀಡಿ ಹಿಂದೂಗಳ ಮೆರವಣಿಗೆಗಳು ಮತ್ತು ಉತ್ಸವಗಳ ಮೇಲೆ ಕಲ್ಲು ತೂರುತ್ತಾರೆ, ಬೆಂಕಿ ಹಚ್ಚುತ್ತಾರೆ ಮತ್ತು ಗಲಭೆಗಳನ್ನು ಸೃಷ್ಟಿಸುತ್ತಾರೆ. 

ಈ ಘಟನೆಗಳ ಮೂಲಕ ಹಿಂದೂ ಸಮಾಜದಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಈ ಗಲಭೆಗಳು ಮತ್ತು ದಾಳಿಗಳು ಕೇವಲ ಕೆಲವರ ಪ್ರಚೋಧನೆಯಿಂದ ನಡೆಯುತ್ತಿಲ್ಲ, ಬದಲಿಗೆ ಇದರ ಹಿಂದೆ ಒಂದು ದೊಡ್ಡ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ. ಈ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಸೂತ್ರಧಾರರು ಯಾರು? ಈ ಕೃತ್ಯಗಳಿಗಾಗಿ ಯುವಕರನ್ನು ಪ್ರಚೋದಿಸುತ್ತಿರುವ ಧರ್ಮಗುರುಗಳು ಯಾರು? ಯಾವ ಮಸೀದಿಗಳು ಮತ್ತು ಮದರಸಾಗಳಿಂದ ಇಂತಹ ಹಿಂಸಾತ್ಮಕ ಫತ್ವಾಗಳನ್ನು ಹೊರಡಿಸಲಾಗುತ್ತಿದೆ? ಈ ಸಂಘಟನೆಗಳಿಗೆ ಸಿಗುವ ಆರ್ಥಿಕ ಮತ್ತು ರಾಜಕೀಯ ಬೆಂಬಲ ಎಲ್ಲಿಂದ ಬರುತ್ತಿದೆ? ಇದರ ಆಳವಾದ ತನಿಖೆಯಾಗುವುದು ಅತ್ಯಂತ ಅವಶ್ಯಕವಾಗಿದೆ. ಈ ಮೂಲ ಕಾರಣಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ವಕೀಲರಾದ ತೀರ್ಥೇಶ್, ಈಶ್ವರ ಕೊಟ್ಟಾರಿ, ಯತೀಶ್ ಬಜಾಲ್, ರಾಜೇಶ್ ಕುಡ್ವ, ಜಲಜಾಕ್ಷಿ, ಪವನಾಂಜಯ ಮತ್ತು ಧರ್ಮ ಪ್ರೇಮಿಗಳಾದ ರಾಜೇಂದ್ರ ಪೇಜಾವರ, ಹಿಂದೂ ಜನಜಾಗೃತಿ ಸಮಿತಿಯ ಪವಿತ್ರಾ ಕುಡ್ವ, ಉಪೇಂದ್ರ ಆಚಾರ್ಯ, ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article