ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಎಂ.ಬಿ.ಎ (ಐಬಿ) ವಿಭಾಗದ ವತಿಯಿಂದ ಸಂಶೋಧನಾ ಕಾರ್ಯಾಗಾರ

ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಎಂ.ಬಿ.ಎ (ಐಬಿ) ವಿಭಾಗದ ವತಿಯಿಂದ ಸಂಶೋಧನಾ ಕಾರ್ಯಾಗಾರ


ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಎಂ.ಬಿ.ಎ (ಇಂಟರ್ನ್ಯಾಷನಲ್ ಬಿಸಿನೆಸ್) ವಿಭಾಗದ ವತಿಯಿಂದ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರಲ್ಲಿ ಶೈಕ್ಷಣಿಕ ಸಂಶೋಧನೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಮಾತನಾಡಿ, ಸಂಶೋಧನೆ ಶಿಕ್ಷಣದ ಆತ್ಮ. ವಿದ್ಯಾರ್ಥಿಗಳು ವಿಚಾರಶೀಲತೆಯನ್ನು ಬೆಳೆಸಿಕೊಂಡು ಸಮಾಜಮುಖಿ ವಿಚಾರಧಾರೆಯ ಸಂಶೋಧನೆ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಬಿ.ಎಂ. ಉಪಸ್ಥಿತರಿದ್ದರು. ಅವರು ಸಂಶೋಧನೆಯ ಮೂಲ ಹಂತಗಳು, ವಿಷಯದ ಆಯ್ಕೆ, ವಿಧಾನಶಾಸ್ತ್ರ ಹಾಗೂ ಅಂಕಿ-ಅಂಶಗಳ ವಿಶ್ಲೇಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕಾರ್ಯಕ್ರಮಗಳ ಸಲಹೆಗಾರ ಪ್ರೊ. ಜಯವಂತ ನಾಯಕ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, ವಿದ್ಯಾರ್ಥಿಗಳು ಪ್ರಾಯೋಗಿಕ ಸಂಶೋಧನೆಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಸ೦ಶೋಧನಾ ವಿಧಾನದ ಬಹು ಆಯಾಮಗಳ ಕುರಿತು ವಿಚಾರಮ೦ಡನೆ ಮಾಡಿದರು.

ಸಂಶೋಧನಾ ವಿಧಾನ ಕಾರ್ಯಾಗಾರವನ್ನು ವಿಭಾಗದ ಅಧ್ಯಾಪಕ ರಾಜೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸಂಯೋಜಕರಾದ ಸರ್ವಾಣಿ ಹಾಗೂ ಧರ್ಮಣ್ಣ ಅವರ ಸಹಕಾರದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಂಶೋಧನಾ ವಿಧಾನಗಳು ಮತ್ತು ಅನುಷ್ಠಾನಗಳ ಕುರಿತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 

ಎಂ.ಬಿ.ಎ ಮತ್ತು ಎಂ.ಕಾಂ ವಿಭಾಗದ ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಂ.ಬಿ.ಎ(ಐಬಿ) ವಿದ್ಯಾರ್ಥಿಗಳಾದ ಶೋಹಾನ್ ನಿರೂಪಿಸಿ,  ಶ್ರೇಯಾ ಸ್ವಾಗತಿಸಿದರು. ಲಾವಣ್ಯ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article