ವಿಶ್ವವಿದ್ಯಾಲಯ ಕಾಲೇಜು ಕಾಂಪೌಂಡ್ ಗೋಡೆಗಳಲ್ಲಿರುವ ಬಿತ್ತಿಚಿತ್ರಗಳ ಸ್ವಚ್ಛತೆ
Sunday, October 5, 2025
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ: ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಕ್ಟೋಬರ್ ತಿಂಗಳ ಸ್ವಚ್ಛತಾ ಶ್ರಮದಾನವು ಮಂಗಳೂರು ಕ್ಲಾಕ್ ಟವರ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಿತು.
ಕೋಲ್ಕತ್ತಾ ರಾಮಕೃಷ್ಣ ಮಿಷನ್ ಶಾರದಾ ಪೀಠದ ಸ್ವಾಮಿ ವಿದ್ಯಾಮೃತನಂದಜಿ ಮತ್ತು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದರು ಜಂಟಿಯಾಗಿ ಹಸಿರು ನಿಶಾನೆತೋರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಸ್ವಾಮಿ ವಿದ್ಯಾಮೃತಾನಂದಜಿ ಮಾತನಾಡಿ, ನಮ್ಮ ಪಶ್ಚಿಮ ಬಂಗಾಳದಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಜನಪ್ರಿಯವಾಗಿದೆ. ಈ ಕಾರ್ಯದಲ್ಲಿ ಮಂಗಳೂರಿನ ಜಾಗೃತ ನಾಗರಿಕರು ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ನೋಡಿ ನನಗೆ ತುಂಬ ಸಂತೋಷವಾಗಿದೆ. ನಮೆಲ್ಲರಿಗೂ ಸ್ವಚ್ಛತೆಯ ಬಗ್ಗೆ ಸಹಜವಾಗಿ ಆಸಕ್ತಿ ಇದೆ, ಆದರೆ ಸಾಮಾನ್ಯವಾಗಿ ನಮ್ಮ ಮನೆಯ ಆವರಣದವರೆಗೆ ಮಾತ್ರ ಸೀಮಿತವಾಗಿರುತ್ತದೆ. ನಾವು ಸಾರ್ವಜನಿಕ ಸ್ಥಳಗಳನ್ನೂ ನಮ್ಮದಾಗಿ ಕಾಣುವ ಸ್ವಾಮ್ಯಭಾವವನ್ನು ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಂಗಳೂರಿಗರು ಉಳಿದೆಲ್ಲರಿಗೂ ಆದರ್ಶಪ್ರಾಯರಾಗಿದ್ದರೆ ಎಂದು ಹೇಳಿದರು.
ಕ್ಯಾ. ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಅಶೋಕ್ ಸುಬ್ಬಯ್ಯ, ಕೃಷ್ಣ ಭವನ ಆಟೋ ಪಾರ್ಕ್‌ನ ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ನವೀನ್ ಕುಮಾರ್, ಪುರಷೋತ್ತಮ್, ರೂಪೇಶ್, ಆನಂದ ಕುಲಾಲ್, ಶಿವರಾಂ ಮತ್ತು ಸತ್ಯನಾರಾಯಣ ಕೆ.ವಿ. ಅವರ ತಂಡ ಕ್ಲಾಕ್ ಟವರ್ ವೃತ್ತದ ಜೊತೆಗೆ ಮಿನಿ ವಿಧಾನಸೌಧದ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸಿದರು.
ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ ನೇತೃತ್ವದಲ್ಲಿ ಡಾ. ರಾಜೇಂದ್ರ ಪ್ರಸಾದ್, ಎಂ. ರಾಮಚಂದ್ರ ಭಟ್, ರವೀಂದ್ರನಾಥ ನಾಯಕ್, ಬಬಿತಾ ಶೆಟ್ಟಿ, ರಾಜೀವಿ ಚಂದ್ರಶೇಖರ್, ಸುನಂದಾ, ನಾಗೇಶ್, ಅನಿರುದ್ಧ ನಾಯಕ್, ದಾಮೋದರ ಭಟ್, ಗೋಪಿನಾಥ್ ರಾವ್, ಗಣಪತಿ ಎಸ್. ನಾಯಕ್, ರಮೇಶ್ ಪೈ, ವಿಠ್ಠಲ ಪ್ರಭು, ಪುಂಡಲೀಕ ಶೆಣೈ, ಪಿ.ಜಿ. ವೆಂಕಟ್ ರಾವ್, ಗೋಪಾಲ್ ಭಟ್, ಸುಕುಮಾರ ಎಸ್. ಸಾಲಿಯನ್ ಇವರನ್ನು ಒಳಗೊಂಡ ತಂಡ ಕ್ಲಾಕ್ ಟವೆರ್ ಮುಂಭಾಗದಿಂದ ಪ್ರಾರಂಭಿಸಿ ಹಂಪನಕಟ್ಟೆ ವೃತ್ತದವರೆಗಿನ ಡಿವೈಡರ್ ಗಳನ್ನೂ ಶುಚಿಗೊಳಿಸಿದರು.
ದಿಲ್ ರಾಜ್ ಆಳ್ವ, ಬಾಲಕೃಷ್ಣ ಭಟ್, ಹಿಮ್ಮತ್ ಸಿಂಗ್, ಅವಿನಾಶ್, ವಿಜೇಶ್ ದೇವಾಡಿಗ, ರಾಘವೇಂದ್ರ ಕಲ್ಲೂರ್ ಒಳಗೊಂಡ ತಂಡ ಕ್ಲಾಕ್ ಟವರ್ ನೀರಿನ ಕಾರಂಜಿಯಲ್ಲಿ ಪಾಚಿಗಟ್ಟಿದ ನೀರನ್ನು ಒಳಚರಂಡಿ ಹೀರುವ ಟ್ರಕ್ ಬಳಸಿ ಸ್ವಚ್ಛಗೊಳಿಸಲಾಲಾಯಿತು. ಮತ್ತೋಂದೆಡೆ ಉದಯ ಕುಮಾರ್ ಕೆ.ಪಿ ಮತ್ತು ತಂಡ ಅನಧಿಕೃತ ಬ್ಯಾನರ್ಗಳನ್ನು ತೆರವುಗೊಳಿಸಿದರು. ಈ ಕಾರ್ಯಕ್ರಮವು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯಿತು.
ಕಾಂಪೌಂಡ್ ಗೋಡೆಗಳಲ್ಲಿರುವ ಬಿತ್ತಿಚಿತ್ರಗಳ ಸ್ವಚ್ಛತೆ:
ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿಗಳ ತಂಡವು ಡಾ. ಧನೇಶ್ ಕುಮಾರ್ ಮತ್ತು ಡಾ. ರುಚಿತಾ ನರ್ಸಿಯಾ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಕಾಂಪೌಂಡ್ ಗೋಡೆಗಳಲ್ಲಿರುವ ಬಿತ್ತಿಚಿತ್ರಗಳನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸ್ವಯಂಸೇವಕರು ಗೋಡೆಯ ಮೇಲೆ ಬೆಳೆದಿದ್ದ ಸಸಿಗಳನ್ನು ತೆಗೆದು, ಪಾದಚಾರಿ ಮಾರ್ಗಕ್ಕೆ ಅಡ್ಡಿಯಾಗುತ್ತಿದ್ದ ಕೊಂಬೆಗಳನ್ನು ಕತ್ತರಿಸಿ, ಸ್ಕ್ರಬ್ಬರ್, ಸ್ಪಂಜ್ ಮತ್ತು ಸಾಬೂನು ನೀರನ್ನು ಬಳಸಿ ಬಿತ್ತಿಚಿತ್ರಗಳ ಮೇಲೆ ಜಮೆಯಾಗಿದ್ದ ಪಾಚಿ ಮತ್ತು ಧೂಳನ್ನು ಸಂಪೂರ್ಣವಾಗಿ ತೆಗೆದು ಚಿತ್ರಗಳಿಗೆ ಮತ್ತೆ ಮೆರಗು ನೀಡಿದರು. ಅಂತಿಮವಾಗಿ ಟ್ಯಾಂಕರ್ ಮೂಲಕ ನೀರುಹಾಯಿಸಿ ಸಂಪೂರ್ಣ ಸ್ವಚ್ಛಗೊಳಿಸಲಾಯಿತು.
ಈ ಭಿತ್ತಿಚಿತ್ರಗಳು ಕೇವಲ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಸಾರ್ವಜನಿಕರು ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುವುದನ್ನು ತಡೆಯುವ ಮೂಲಕ ಸ್ವಚ್ಛತೆಯ ಅರಿವು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಸಮಾಜದಲ್ಲಿ ತಿಳಿಪಡಿಸಲು ಸಹಕಾರಿಯಾಗಿವೆ.






