ಉಳ್ಳಾಲ ಪೊಲೀಸ್ ಅಧಿಕಾರಿ-ಸಾರ್ವಜನಿಕರ ನಡುವೆ ವಾಗ್ವಾದ: ಸುಳ್ಳು ಕೇಸು ಹಿಂಪಡೆಯುವಂತೆ ವಿ.ಹೆಚ್.ಪಿ. ಆಗ್ರಹ
Saturday, October 4, 2025
ಮಂಗಳೂರು: ಐತಿಹಾಸಿಕ ಉಳ್ಳಾಳದ 78ನೇ ವರ್ಷದ ಶ್ರೀ ಶಾರದ ಮಾತೆಯ ವಿಸರ್ಜನಾ ಮೆರವಣಿಗೆಗೆ ತಡೆ ಒಡ್ಡಿದ ಉಳ್ಳಾಲದ ಪೊಲೀಸ್ ಅಧಿಕಾರಿಗಳ ನಡೆಯನ್ನು ಮತ್ತು ಮಹಿಳೆಯರು ಸೇರಿದಂತೆ 30 ಜನ ಶಾರದಾ ದೇವಿಯ ಭಕ್ತರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ವಿಶ್ವಹಿಂದೂ ಪರಿಷತ್-ಬಜರಂಗದಳ ತೀಕ್ಷ್ಯವಾಗಿ ಖಂಡಿಸುತ್ತದೆ ಮತ್ತು ಹಾಕಿರುವ ಸುಳ್ಳು ಕೇಸುಗಳನ್ನು ತಕ್ಷಣ ತೆಗೆದು ಹಾಕುವಂತೆ ಆಗ್ರಹಿಸುತ್ತದೆ.
ಇಂತಹ ದುರ್ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಅ.5 ರಂದು ಎಲ್ಲಾ ದೇವಸ್ಥಾನ-ದೈವಸ್ಥಾನ ಮತ್ತು ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಶಾರದೋತ್ಸವ ಸಮಿತಿ ಕರೆ ನೀಡಿದ್ದು ವಿಶ್ವ ಹಿಂದೂ ಪರಿಷದ್ ಬೆಂಬಲ ಸೂಚಿಸುತ್ತದೆ.
ಅಲ್ಲದೇ ಅಧಿಕಾರದ ದುರ್ಬಳಕೆ ಮಾಡಿರುವಂತಹ ಉಳ್ಳಾಲದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸ್ ಆಯುಕ್ತರನ್ನು ವಿಶ್ವಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದರು.