ಉಳ್ಳಾಲ ಶ್ರೀ ಶಾರದೋತ್ಸವ ಸಂದರ್ಭದಲ್ಲಿ ನಡೆದ ಗೊಂದಲದ ಬಗ್ಗೆ ಸೂಕ್ತ ನಡೆಸಿ ವರದಿ ಮಾಡಲು ಪೋಲಿಸ್ ಕಮಿಷನರ್ ಗೆ ಸೂಚನೆ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್
Saturday, October 4, 2025
ಉಳ್ಳಾಲ: ಉಳ್ಳಾಲ ಶಾರದೋತ್ಸವ ಮೆರವಣಿಗೆಯು ಅತ್ಯಂತ ಪಾವತ್ರ್ಯತೆಯಿಂದ ಬಹಳಷ್ಟು ವರ್ಷಗಳಿಂದ ನಡೆಯುತ್ತಿದೆ.ಉಳ್ಳಾಲ ಶಾರದೋತ್ಸವವು ಧಾರ್ಮಿಕತೆಯ ಆಚರಣೆಯ ಜೊತೆಯಲ್ಲಿ ಉಳ್ಳಾಲದ ಸೌಹಾರ್ದತೆಯ ಸಂಕೇತವಾಗಿದೆ.
ಮೊನ್ನೆ ನಡೆದ ಘಟನೆಯು ಅತ್ಯಂತ ವಿಷಾದನೀಯ, ಈ ಗೊಂದಲದ ಬಗ್ಗೆ ಕೆಲವು ಪೊಲೀಸರು ಕಾರಣ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯವಿದೆ.ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಯಾರಾದರೂ ಇದ್ದಲ್ಲಿ ಕ್ರಮ ಕೈಗೊಂಡು, ಘಟನೆಯಲ್ಲಿ ಅಮಾಯಕರಿಗೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ.
ಈ ಬಗ್ಗೆ ವಿದೇಶದಲ್ಲಿ ಸ್ಪೀಕರ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿತ್ತಿರುವ ಯು.ಟಿ.ಖಾದರ್ ರವರು ಪೊಲೀಸ್ ಕಮಿಷನರ್ ಜೊತೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾರೆ.