ಮೆಸ್ಕಾಂನಲ್ಲಿ ಗಾಂಧಿ ಜಯಂತಿ ಆಚರಣೆ
ದೀಪ ಬೆಳಗಿಸಿ ಮಹಾತ್ಮ ಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾಚ೯ನೆಗೈದು ಸ೦ದೇಶ ನೀಡಿದ ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಮುರಲೀಧರ ನಾಯಕ್ ಅವರು, ಮಹಾನ್ ನಾಯಕರಾದ ಮಹಾತ್ಮಗಾ೦ಧೀಜಿಯವರು ಸತ್ಯ, ಅಹಿ೦ಸಾ ಮಾಗ೯ದಲ್ಲಿ ನಡೆದು ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತ೦ತ್ರ್ಯ ತ೦ದುಕೊಟ್ಟರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ, ಸಜ್ಜನಿಕೆ ವ್ಯಕ್ತಿತ್ವದ ದೂರದಶಿ೯ ಮತ್ತು ಧೃಡ ನಿಧಾ೯ರಗಳ ಮೂಲಕ ದೇಶದ ಪ್ರಗತಿಗೆ ತನ್ನದೆ ಆದ ಕೊಡುಗೆಗಳನ್ನು ನೀಡಿದವರು ಎ೦ದರು.
ಮಹಾತ್ಮಗಾ೦ಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಸ೦ದೇಶಗಳು ನಮಗೆ ಆದಶ೯ವಾಗಲಿ.ಸೇವಾ ಬದ್ದತೆ, ಜನಸ್ಜೇಹಿ ಪರ೦ಪರೆಯೊ೦ದಿಗೆ ಮುನ್ನಡೆಯುತ್ತಿರುವ ಮೆಸ್ಕಾ೦ ಇನ್ನಷ್ಟು ಉನ್ನತಿಯ ಪಥದಲ್ಲಿ ಸಾಗುವ ನಿಟ್ಟಿನಲ್ಲಿ ಒಗ್ಗೂಡಿ ಶ್ರಮಿಸೋಣ ಎ೦ದು ಹೇಳಿದರು.
ಕಾಯ೯ನಿವಾ೯ಹಕ ಎ೦ಜಿನಿಯರ್ ಜಯಪ್ರಕಾಶ್, ಎಜಿಎ೦ ಪುಷ್ಪರಾಜ್, ಡಿಸಿಎ (ಫೈನಾನ್ಸ್) ರಘರಾಮ ಶೆಟ್ಟಿ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.