ಮನಸೂರೆಗೊಂಡ ‘ವಿಹಂಗಮ’
Monday, October 6, 2025
ಮಂಗಳೂರು: ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಸೆಂಚುರಿ ಗ್ರೂಪ್‌ನ ಅಧ್ಯಕ್ಷ ಡಾ.ಪಿ.ದಯಾನಂದ ಪೈ ಸಹ ಪ್ರಾಯೋಜಕತ್ವದಲ್ಲಿ ಪುರಭವನದಲ್ಲಿ ಭಾನುವಾರ ಆಯೋಜಿಸಿದ ‘ವಿಹಂಗಮ’ ಕರ್ನಾಟಕೀ ಮತ್ತು ಹಿಂದೂಸ್ತಾನಿ ಜುಗಲ್ ಬಂದಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಕಲಾವಿದ ವಿದ್ವಾನ್ ಡಾ.ಮೈಸೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್, ಟ್ರಸ್ಟಿ ಡಾ.ರಮೇಶ್ ಕೆ.ಜಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಉಷಾ ಪ್ರಭಾ ಎನ್. ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಅಂಕುಶ್ ಎನ್.ನಾಯಕ್ ಕಲಾವಿದರನ್ನು ಪರಿಚಯಿಸಿದರು.
ಮನಸೂರೆಗೈದ ಜುಗಲ್ ಬಂದಿ:
ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಡಾ.ಮೈಸೂರು ಮಂಜುನಾಥ್ ಮತ್ತು ಉಸ್ತಾದ್ ರಫೀಕ್ ಖಾನ್ ಅವರಿಂದ ವಯೋಲಿನ್-ಸಿತಾರ್ ಜುಗಲ್ ಬಂದಿ ನಡೆಯಿತು. ಮೃದಂಗದಲ್ಲಿ ಚೆನ್ನೈನ ವಿದ್ವಾನ್ ತಿರುವಾರೂರು ಭಕ್ತವತ್ಸಲಂ ಮತ್ತು ತಬ್ಲಾದಲ್ಲಿ ಮುಂಬಯಿಯ ಓಜಸ್ ಅಧಿಯಾ ಅವರು ಸಾಥ್ ನೀಡಿದರು.