ರಾಜ್ಯ ಸರಕಾರದಿಂದ ಕಾರ್ಮಿಕರ ಸಶಕ್ತೆಗೆ ಒತ್ತು: ಸ್ಮಾರ್ಟ್‌ಕಾರ್ಡ್ ವಿತರಣೆ

ರಾಜ್ಯ ಸರಕಾರದಿಂದ ಕಾರ್ಮಿಕರ ಸಶಕ್ತೆಗೆ ಒತ್ತು: ಸ್ಮಾರ್ಟ್‌ಕಾರ್ಡ್ ವಿತರಣೆ


ಮಂಗಳೂರು: ನಾಟಕ, ಯಕ್ಷಗಾನ ಕಲಾವಿದರಿಗೆ, ಕಂಬಳ ಕಾರ್ಮಿಕರಿಗೆ, ಸಿನಿಮಾ ಕಾರ್ಮಿಕರಿಗೆ, ಖಾಸಗಿ ಸಾರಿಗೆ ಕಾರ್ಮಿಕರಿಗೆ ಹಾಗೂ ಗುತ್ತಿಗೆ ಕಾರ್ಮಿಕರಾಗಿ ಕಾರ್ಮಿಕ ಇಲಾಖೆಯ ಸೌಲಭ್ಯ ನೀಡಲು ರಾಜ್ಯ ಸರಕಾರ ನೀತಿ ರೂಪಿಸಿ ಸಶಕ್ತತೆಗೆ ಒತ್ತು ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ತಿಳಿಸಿದ್ದಾರೆ. 

ಕಾರ್ಮಿಕ ಇಲಾಖೆ ,ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ , ಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಅಡ್ಯಾರ್ ಗಾರ್ಡ್‌ನ್‌ನಲ್ಲಿ ಶುಕ್ರವಾರ ಹಮ್ಮಿಕೊಂಡ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿದ ಅವರು, ಇಎಸ್‌ಐ ಕಾರ್ಡ್ ಹೆಚ್ಚಿನವರಿಗೆ ದೊರೆಯ ಬೇಕಾದರೆ ಮಾಸಕ ವೇತನದ ಮಿತಿಯನ್ನು ೨೧ಸಾವಿರದಿಂದ ೩೦ ಸಾವಿರಕ್ಕೆ ಏರಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ.ಎಲ್ಲಾ ಇಎಸ್‌ಐ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯು ವಂತೆ ಮಾಡಲು ರಾಜ್ಯ ಸರಕಾರ ಜೇಂದ್ರದ ನೆರವಿನೊಂದಿಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಪುನರ್ವಸತಿ ಕಲ್ಪಿಸಲು ಚಿಂತನೆಹೊಂದಿದೆ. ಆನ್‌ಲೈನ್‌ಗಳ ಮೂಲಕ ಕೆಲಸ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅಭಿವೃದ್ಧಿಗೆ ಸಂಬಂಧಿಸಿದ ಮಸೂದೆ ಜಾರಿಗೆ ಬರಲಿದೆ. ಸರಕಾರ ಕಡ್ಡಾಯ ಗ್ರ್ಯಾಚುವಿಟಿ ವಿಮಾ ಮಸೂದೆಯನ್ನು ಜಾರಿಗೆ ತರಲಿದೆ ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ಸಿನಿಮಾ ರಂಗದಲ್ಲಿ ಕಾರ್ಮಿಕರಾಗಿ ದುಡಿಯುವವರಿಗೆ, ನೀತಿ ರೂಪಿಸಿ ಕಾರ್ಮಿಕ ಇಲಾಖೆಯಿಂದ ಸಾಮಾಜಿಕ ಭದ್ರತೆ ನೀಡುವ ಗುರಿ ಇದೆ.ಟೈಲರಿಂಗ್ ವ್ರತ್ತಿ ನಡೆಸುವವರಿಗೆ, ಕಂಬಳದಲ್ಲಿ ಕೋಣ ಓಡಿಸುವವರಿಗೆ ಹಾಗೂ ಇತರ ಕೆಲಸಗಾರರಿಗೂ ಸಾಮಾಜಿಕ ಭದ್ರತೆ ವ್ಯವಸ್ಥೆ ಕಲ್ಪಿಸುವ ಗುರಿ ಇದೆ ಎಂದು ತಿಳಿಸಿದರು.

ಸಾರಿಗೆ ಮಸೂದೆ:-,ರಾಜ್ಯದಲ್ಲಿ ವಾಹನ ಚಾಲಕರು,ನಿರ್ವಾಹಕರು,ಕ್ಲೀನರ್,ಚೆಕ್ಕಿಂಗ್ ಹಾಗೂ ಇತರ ಸಿಬ್ಬಂದಿ ಸೇರಿದಂತೆ ಸಾರಿಗೆ ವಿಭಾಗದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಿ ಇಲಾಖೆಯ ಸೌಲಭ್ಯ ನೀಡುವ ಗುರಿ ಇದೆ.ಪರಿಶಿಷ್ಟ ಜಾತಿ,ಪಂಗಡದ ಕಾರ್ಮಿಕರ ನ್ನು ನೇಮಿಸಿಕೊಳ್ಳುವ ಖಾಸಗಿ ಸಂಸ್ಥೆಗಳಿಗೆ ಅವರ ಸಾಮಾಜಿಕ ಭದ್ರತೆಯ ಮೊತ್ತವನ್ನು ಸರಕಾರ ಭರಿಸಲಿದೆ ಎಂದು ಸಂತೋಷ್ ಲಾಡ್ ವಿವರಿಸಿದರು 

ಮುಖ್ಯ ಅತಿಥಿಯಾಗಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ, ರಾಜ್ಯ ಸರಕಾರ ಮಹಿಳೆಯರ ಪರವಾಗಿ ಸಾಕಷ್ಟು ಯೋಜನೆಗಳು ಮಾಡುತ್ತುದೆ ಎನ್ನುವುದಕ್ಕೆ ಶಕ್ತಿ ಯೋಜನೆ ಕಾರ್ಮಿಕ ಇಲಾಖೆಯ ಮೂಲಕ ಜಾರಿ ಮಾಡಿರುವ ಋತು ಚಕ್ರದ ವೇತನ ಸಹಿತ ರಜಾ ದಿನದ ಸೌಲಭ್ಯ ಒಂದು ಉದಾಹರಣೆ ಎಂದರು. 

ಕಾರ್ಮಿಕ ಇಲಾಖೆಯ ಮೂಲಕ ಜಾರಿ ಮಾಡಲು ಉದ್ದೆಶಿಸಿರುವ ಹಲವಾರು ಮಸೂದೆಗಳ ಮೂಲಕ ರಾಜ್ಯದ ಅಸಂಘಟಿತ ವಲಯದ ಬೃಹತ್ ಜನಸಮೂಹಕ್ಕೆ ಸಹಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಭರತ್ ಶೆಟ್ಟಿ, ಕಾರ್ಮಿಕರಿಗೆ ಸಂಪೂರ್ಣವಾಗಿ ಸಾಮಾಜಿಕ ಭದ್ರತೆ ದೊರೆಯುವಂತಾಗಬೇಕು ಎಂದರು. 

ಶಾಸಕರಾದ ವೇದವ್ಯಾಸ ಕಾಮತ್,ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಡಾ.ಮಂಜುನಾಥ ಭಂಡಾರಿ,ಮಾಜಿ ಸಚಿವ ಅಭಯ ಚಂದ್ರ ಜೈನ್,ನಾಗರಾಜ ಶೆಟ್ಟಿ,ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ರಾಜ್ಯ ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲ ಕೃಷ್ಣ,ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕರ್ಬಾರಿ, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್,ದ.ಕ ಕಾರ್ಮಿಕ ಅಧಿಕಾರಿಗಳಾದ ಕುಮಾರ್ ಬಿ.ಆರ್,ವಿಲ್ಮಾ ಎಲಿಜಬೆತ್ ತಾವ್ರೊ ಹಾಗೂ ಇತರ ಅಧಿಕಾರಿಗಳು ನಿಗಮ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article