ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತರ್ ಕಾಲೇಜು ಭಾಷಣ ಸ್ಪರ್ಧೆ
Saturday, October 18, 2025
ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ವತಿಯಿಂದ ಮಾನವಿಕ ಸಂಘ ಮತ್ತು ಆಂತರಿಕ ಗುಣಮಟ್ಟ ಕೋಶದ ಸಹಯೋಗದಲ್ಲಿ ಎಸ್. ಡಿ. ಸಾಮ್ರಾಜ್ಯ ಸ್ಮರಣಾಥ೯ ಮಹಾತ್ಮಾ ಗಾಂಧೀ ವಿಚಾರಧಾರೆ ಕುರಿತು ಮಂಗಳೂರು ವಿ. ವಿ. ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯು ಶನಿವಾರ ನಡೆಯಿತು.
ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಆಶೀರ್ವಾದ್ ಎಂ. ಪಿ ಸ್ಪಧೆ೯ಯನ್ನು ಉದ್ಘಾಟಿಸಿ ಮಾತನಾಡಿ ಗಾಂಧೀಜಿ ಅವರ ಚಿಂತನೆ, ತತ್ವ, ಆದಶ೯ ಮತ್ತು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿ ಗಳಾಗಿ ಗುರುತಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಫಲ. ಈ ಕಾರಣದಿಂದಲೇ ನಾವಿಂದು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ ಎಂದರು.
ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮಾತನಾಡಿ ಗಾಂಧೀಜಿ ಅವರು ಲೌಕಿಕ ಆಸೆಗೆ ಬಲಿಯಾಗದೆ ಹಳ್ಳಿಯಲ್ಲಿ ಆದಶ೯ ಗ್ರಾಮದ ಕಲ್ಪನೆಯನ್ನು ಕಂಡವರು. ಹಳ್ಳಿ ಅಭಿವೃದ್ಧಿಯಾದರೆ ದಿಲ್ಲಿಯೂ ಅಭಿವೃದ್ಧಿ ಹೊಂದಬಹುದು ಎಂದು ಕನಸ್ಸನ್ನು ಕಂಡು ಅದನ್ನು ಕಾಯ೯ಗತಗೊಳಿಸಲು ಪ್ರಯತ್ನಿಸಿದರು ಎಂದ ಅವರು ತನ್ನ ತಂದೆಯ ಸ್ಮರಣಾಥ೯ ಈ ಸ್ಪಧೆ೯ಯನ್ನು ಆಯೋಜಿಸುವ ಮೂಲಕ ವಿದ್ಯಾಥಿ೯ಗಳು ಗಾಂಧೀಜಿಯ ಬಗ್ಗೆ ಅರಿತುಕೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಪ.ಪೂ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ, ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಾಕ್ಷಿ ಶೆಟ್ಟಿ, ಮಾನವಿಕ ಸಂಘದ ಕಾಯ೯ದಶಿ೯ ಸಾಕ್ಷಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾಥಿ೯ನಿ ನಮೃತಾ ಅತಿಥಿಯನ್ನು ಪರಿಚಯಿಸಿದರು. ಕಾಯ೯ಕ್ರಮದ ಸಂಯೋಜಕಿ ಗೀತಾ ರಾಮಕೃಷ್ಣ ವಂದಿಸಿದರು.



