ವಾಲ್ಪಾಡಿ ಪಿಡಿಒ ಮಂಜುಳಾ ಹುನಗಂದಗೆ ಬೀಳ್ಕೊಡುಗೆ
Thursday, October 9, 2025
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ಇದೀಗ ವಗಾ೯ವಣೆಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳಾ ಹುನಗುಂದ ಅವರನ್ನು ಗುರುವಾರ ಗ್ರಾಮ ಪಂಚಾಯತ್ ಪರವಾಗಿ ಅಭಿನಂದಿಸಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ. ಅಳಿಯೂರು, ಪಂಚಾಯತ್ ಸರ್ವ ಸದಸ್ಯರಾದ ಪ್ರದೀಪ್ ಕುಮಾರ್, ಶ್ರೀಧರ್ ಬಂಗೇರ, ಅರುಣ್ ಕುಮಾರ್ ಶೆಟ್ಟಿ, ಭವಾನಿ, ಯಶೋಧ ನಾಯ್ಕ್, ಸುಶೀಲ, ವೈಶಾಲಿ, ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಲಜ, ಕಾರ್ಯದರ್ಶಿ ಶೇಖರ್, ವಾಲ್ಪಾಡಿ ಗ್ರಾಮಕರಣಿಕೆ ನಿಶ್ಮಿತಾ ಹಾಗೂ ಸಿಬ್ಬಂದಿ ವರ್ಗದವರು ಈ ಸಂದಭ೯ದಲ್ಲಿದ್ದರು.