
ಸುಜನ ಬಂಗೇರ ನಿಧನ
Tuesday, October 21, 2025
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮೇಗಿನಮನೆ ಸುಜನ ಯಾನೆ ಮಧುಸುಧನ ಬಂಗೇರ (79) ಅನಾರೋಗ್ಯದಿಂದ ಸೋಮವಾರ ಮರಿಯಾಡಿಯ ಬಂಗೇರ ನಿವಾಸದಲ್ಲಿ ನಿಧನರಾದರು.
ಪ್ರಾರಂಭದಲ್ಲಿ ಅವರು ಮುಂಬಯಿಯಲ್ಲಿ ಹಲವು ವರ್ಷ ಹೋಟೇಲ್ ನಲ್ಲಿ ಕೆಲಸ ಮಾಡಿದ್ದರು. ಊರಿಗೆ ಬಂದ ಬಳಿಕ ಮರಿಯಾಡಿಯಲ್ಲಿ ಹಲವು ವರ್ಷ ಸ್ವಂತ ಹೋಟೇಲ್ ವ್ಯಾಪಾರ ನಡೆಸಿಕೊಂಡು ಬಂದಿದ್ದರು.
ಮೂಡುಬಿದಿರೆಯಲ್ಲೂ ಕೆಲವು ವರ್ಷ ಬೇರೆ ಬೇರೆ ಹೋಟೇಲ್ ಗಳಲ್ಲಿ ದುಡಿದಿದ್ದರು. ಅವರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.