ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಆರೋಪ: ಇಬ್ಬರ ಬಂಧನ

ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಆರೋಪ: ಇಬ್ಬರ ಬಂಧನ

ಮುಲ್ಕಿ: ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸುಳ್ಳು ಸಂದೇಶ ರವಾನೆ ಮಾಡಿದ ಆರೋಪದಲ್ಲಿ ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಶಾಂತಿನಗರದ ಅನ್ವರ್ (44) ಮತ್ತು ತಾಯಿರ ನಕಾಶ್ (42) ಎಂಬವರನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಅ.೧೫ ರಂದು ಈ ಆರೋಪಿಗಳು ಬ್ಯಾರಿ ಭಾಷೆಯಲ್ಲಿ ಒಂದು ಗ್ಯಾಂಗ್ ಇದೆ. ಯಾರು ಕ್ಯಾರ್ಲೆಸ್ ಮಾಡಬೇಡಿ. ಬಜಪೆ, ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ, ಸುರತ್ಕಲ್‌ನ ಜನರು ಮಾತ್ರವಲ್ಲ ಕಿನ್ನಿಗೋಳಿಯವರು ಕ್ಯಾರ್‌ಫುಲ್ ಆಗಿರಬೇಕು ಇತ್ಯಾದಿಯಾಗಿ ಸಂದೇಶ ರವಾನಿಸಿದ್ದಾರೆ. ಸಮಾಜದಲ್ಲಿ ಕೋಮುಗಲಭೆ ಆಗುವಂತಹ ಈ ಸಂದೇಶವನ್ನು ವಾಟ್ಸ್‌ಆಪ್ ಮೂಲಕ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗಾಗಿ ಇಂತಹ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡಬಾರದು ಮತ್ತು ಇಂತಹ ಸಂದೇಶಗಳನ್ನು ಶೇರ್ ಮಾಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article