ಶ್ರೀಮಹಾಲಸಾ ದೇವಳ: ಏಕಾಹ ಭಜನಾ ಮಂಗಲೋತ್ಸವಕ್ಕೆ ಚಾಲನೆ
Friday, October 17, 2025
ಶಿರ್ವ: ಶಿರ್ವ ಶ್ರೀ ಕಾಶೀಮಠ, ಶ್ರೀಮಹಾಲಸಾ ನಾರಾಯಣೀ ದೇವೀ ಸನ್ನಿಧಿಯಲ್ಲಿ ಶುಕ್ರವಾರ ಬೆಳಗ್ಗೆ ಪ್ರಾರಂಭಗೊಂಡ ‘ಏಕಾಹ ಭಜನಾ ಮಂಗಲೋತ್ಸವ’ವನ್ನು ಶ್ರೀ ಕಾಶೀಮಠ ಸಂಸ್ಥಾನ,ವಾರಣಾಸಿ ಮಠಾಧಿಪತಿ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲನದೊಂದಿಗೆ ಚಾಲನೆ ನೀಡಿ ಆಶೀರ್ವಚಿಸಿದರು.
ಶ್ರೀದೇವಳದ ಅಧ್ಯಕ್ಷ ದಾಮೋದರ ಪೈ, ಚಿದಾನಂದ ಪೈ, ನವೀನ್ ಶೆಣೈ, ವೇ.ಮೂ. ರವೀಂದ್ರ ಭಟ್, ಶ್ರೀದೇವಳದ ಅರ್ಚಕ ರಘುರಾಮ ಶೆಣೈ, ಭಜನಾ ಮಂಡಳಿ ಅಧ್ಯಕ್ಷ ಜಿ. ಶ್ರೀನಿವಾಸ ಶೆಣೈ, ಕಾರ್ಯದರ್ಶಿ ನರಸಿಂಹ ಭಟ್, ನಾಗರಾಜ ಪ್ರಭು, ವೆಂಟೇಶ ಪೈ, ರಾಜೇಶ್ ಪ್ರಭು, ರವಿ ಶೆಣೈ, ರಾಮಚಂದ್ರ ಶೆಣೈ, ರಮೇಶ್ ಪ್ರಭು, ಕೊಟೇಶ್ವರ ದಿನೇಶ್ ಕಾಮತ್, ಆರ್ಬೆಟ್ಟು ಮಾಧವ ಕಾಮತ್, ಕಟಪಾಡಿ ಶ್ರೀ ವೆಂಕಟರಮಣ ದೇವಳದ ಅಧ್ಯಕ್ಷ ಮಟ್ಟಾರು ದಿನೇಶ್ ಕಿಣಿ ಸೇರಿದಂತೆ ಶ್ರೀದೇವಳದ ಭಗವದ್ಭಕ್ತರು ಉಪಸ್ಥಿತರಿದ್ದರು.
ರಾತ್ರಿ ಶ್ರೀದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಉಡುಪಿ ಮತ್ತು ದ.ಕ. ಜಿಲ್ಲೆಯಿಂದ 33 ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.