ದಕ್ಷಿಣ ಕನ್ನಡ ಹಾಗೂ ಹಾಸನ ಗಡಿನಾಡಿನಲ್ಲಿರುವ ಬೂದಿ ಚೌಡಿ ದೇವಿಗೆ ವಿಶೇಷ ಪೂಜೆ

ದಕ್ಷಿಣ ಕನ್ನಡ ಹಾಗೂ ಹಾಸನ ಗಡಿನಾಡಿನಲ್ಲಿರುವ ಬೂದಿ ಚೌಡಿ ದೇವಿಗೆ ವಿಶೇಷ ಪೂಜೆ


ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಬಿಸ್ಲೆಗೆ ಸಂಚರಿಸುವ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ಚೌಡಮ್ಮ ದೇವಿಗೆ ವಿಶೇಷ ಪೂಜೆಯನ್ನು ಶುಕ್ರವಾರ ಸಲ್ಲಿಸಲಾಗಿದೆ.

60 ವರ್ಷ ಇತಿಹಾಸವಿರುವ ಈ ಸಾನಿಧ್ಯವು ಮೊದಲಿಗೆ ಕಲ್ಲಿನ ಪಾದವನ್ನು ಇರಿಸಿ ಪೂಜಿಸುತ್ತಿದ್ದು, ನಂತರದ ದಿನಗಳಲ್ಲಿ ಕೈಕುರೆ ರಾಮಣ್ಣಗೌಡ ಎಂಬವರು ತನ್ನ ಸ್ವಂತ ಖರ್ಚಿನಲ್ಲಿ ಗುಡಿಯನ್ನು ನಿರ್ಮಿಸಿದರು.

ಅರಣ್ಯ ಅಧಿಕಾರಿಯಿಂದ ದೇವಿಯ ವಿಗ್ರಹ ಸ್ಥಾಪನೆ:

ಆಗಿನ ಹಾಸನ ವಿಭಾಗದ ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಯಾಗಿದ್ದಂತಹ ಅಣ್ಣಯ್ಯ ದೇವಿಯ ವಿಗ್ರಹವನ್ನು ತನ್ನ ಸ್ವಂತ ಖರ್ಚಿನಲ್ಲಿ ಸ್ಥಾಪನೆ ಮಾಡಿದರು.

ಅರಣ್ಯ ಸಿಬ್ಬಂದಿಗಳಿಂದ ನಿತ್ಯ ಪೂಜೆ:

ದೇವಿಯ ಸಾನಿಧ್ಯಾವನ್ನು ನಿತ್ಯವೂ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಅರಣ್ಯ ಇಲಾಖೆಯ ಸಿಬಂಧಿಗಳು ದೇವಿಯ ಸಾನಿಧ್ಯವನ್ನು ಸುಚಿತ್ವ ಗೊಳಿಸಿ ಪೂಜೆಯನ್ನು ನೆರವೇರಿಸುತ್ತಾರೆ.

ದಿನನಿತ್ಯ ನೂರರು ವಾಹನ ಸವಾರರಿಂದ ದೇವಿಗೆ ಪೂಜೆ:

ಕುಕ್ಕೆ ಸುಬ್ರಮಣ್ಯದಿಂದ ಸಕ್ಲೇಶಪುರ ಹಾಗೂ ಕೊಡಗು ಜಿಲ್ಲೆಗಳಿಗೆ ಸಂಪರ್ಕಿಸುವ ಈ ರಸ್ತೆಯು ಪ್ರವಾಸಿಗರಿಗೆ ಕಣ್ತುಂಬಿಕೊಳ್ಳಲು ಹಲವಾರು ಪ್ರೇಕ್ಷಣಿಯ ಸ್ಥಳಗಳಿದ್ದು ದೇವಿಯ ಸನಿದ್ಯಾವು ಸುಬ್ರಮಣ್ಯದಿಂದ ಸರಿಸುಮಾರು 10 ರಿಂದ 12 ಕಿಲೋಮೀಟರ್ ದೂರದಲ್ಲಿದ್ದು ಪ್ರತೀದಿನ ಈ ದಾರಿಯಲ್ಲಿ ಸಂಚರಿಸುವ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪೂಜೆಯನ್ನು ನೆರವೇರಿಸಿಸುತ್ತಿದ್ದು ನವರಾತ್ರಿಯ ವಿಜಯ ದಶಮಿ ದಿನನದಂದು ಇಲ್ಲಿ ದೇವಿಯ ವಿಗ್ರಹವನ್ನು ಹೂವು ಹಾಗೂ ವಸ್ತುಗಳಿಂದ ಅಲಂಕರಿಸಿ ಪಂಚಾಮೃತ ಅಭಿಷೇಕ ಮಾಡಿ ದೇವಿಗೆ ಪೂಜೆಯನ್ನು ನೆರವೇರಿಸುತ್ತಿದ್ದು, ಸುಮಾರು 25 ವರ್ಷ ಗಳಿಂದ ಅರ್ಚಕರಾದ ಶ್ರೀಕರ ಭಟ್ ಮುಕೇನ ಚೆನ್ನಪ್ಪ ಮೇಸ್ತ್ರಿ ಸುಬ್ರಮಣ್ಯ ಮತ್ತು ನಿವೃತ್ತಿ ಅರಣ್ಯ ರಕ್ಷಕರಾದ ಅಲೆಕ್ಸ್, ಸುಬ್ರಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯರಾದ ಲೋಕಾಕ್ಷ್ ಕೈಕಂಬ ಚೆನ್ನಪ್ಪ ಮೇಸ್ತ್ರಿಯವರ ದೈವಾದಿನರಾದ ನಂತರ ಇವರ ಮಗನಾದ ವಿನಯಕುಮಾರ್ ಹಾಗೂ ಊರಿನ ಅನೇಕರು ಸೇರಿಕೊಂಡು ಪೂಜೆಯನ್ನು ನೆರವೇರಿಸಿಕೊಂಡು ಬರುತ್ತಿರುತ್ತಾರೆ.

ದೇವಿಯ ಸಾನಿದ್ಯಾಕ್ಕೆ ಭದ್ರತೆಯ ಕೊರತೆ:

ದೇವಿಯ ಸಾನಿಧ್ಯದಲ್ಲಿ ಈ ಹಿಂದೆ ಅನೇಕ ಬಾರಿ ಕಾಣಿಕೆ ಹುಂಡಿಕಳವು ಸೇರಿದಂತೆ ಭಕ್ತರು ಸಮರ್ಪಿಸಿದ ಚಿನ್ನದ ತಾಳಿ, ದೇವಿಯ ವಿಗ್ರಹ ಅನೇಕ ಬೆಲೆಬಾಳುವ ವಸ್ತುಗಳು ಕಳವಾಗಿರುವುದು ಇದು ಅಭದ್ರತೆಯನ್ನು ತೋರಿಸುತ್ತಿದೆ.ಮಾತ್ರವಲ್ಲದೆ ಪ್ರವಾಸಿಗರು ಹಾಗೂ ಭಕ್ತರು ಕಸಗಳನ್ನು ಮತ್ತು ಪ್ಲಾಸ್ಟಿಕ್ ಬಾಟಲ್ ಎಲ್ಲಂದರಲ್ಲಿ ಎಸೆಯುವುದರಿಂದ ಪರಿಸರ ಸ್ವಚ್ಛತೆಯ ದ್ರಿಷ್ಟಿಯಿಂದಲೂ ಇಲ್ಲಿ ಅಅ ಕ್ಯಾಮರಾ ಅಳವಡಿಸಿ ಭದ್ರತೆ ಒದಗಿಸುವುದು ಬಹಳ ಮುಖ್ಯ ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಕ್ಕೆ ಸುಬ್ರಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಲೋಲಾಕ್ಷ ಕೈಕಂಬ ಹಾಗೂ ನಿವೃತ್ತ ಅರಣ್ಯ ಅಧಿಕಾರಿ ಅಲೆಕ್ಸ್ ಮಧ್ಯಮಕ್ಕೆ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article