ಕುಕ್ಕೆಸುಬ್ರಹ್ಮಣ್ಯ ದೇವಳದಲ್ಲಿ ಗಜಲಕ್ಷಿ ಪೂಜೆ

ಕುಕ್ಕೆಸುಬ್ರಹ್ಮಣ್ಯ ದೇವಳದಲ್ಲಿ ಗಜಲಕ್ಷಿ ಪೂಜೆ


ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಮಹಾನವಮಿಯ ದಿನವಾದ ಗುರುವಾರ  ಗಜಲಕ್ಷ್ಮೀ ಪೂಜೆಯು ನಡೆಯಿತು. ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ಯಶಸ್ವಿಗೆ ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು.

ಶ್ರೀ ದೇವರ ಮದ್ಯಾಹ್ನದ ಮಹಾಪೂಜೆಯ ಬಳಿಕ ಶ್ರೀ ದೇವಳದ ಮುಂಭಾಗದಲ್ಲಿ ಯಶಸ್ವಿಗೆ ಪೂಜಾ ವಿದಿ ವಿಧಾನವನ್ನು ಕ್ಷೇತ್ರ ಪುರೋಹಿತರು ನೆರವೇರಿಸಿದರು. ಅಲ್ಲದೆ ಆನೆಗೆ ಹಣ್ಣುಹಂಪಲು ತೆಂಗಿನಕಾಯಿ, ಅವಲಕ್ಕಿ, ಹೊದ್ಲು, ಬೆಲ್ಲ,ಹಣ್ಣು ಹಂಪಲು, ತೆಂಗಿನ ಕಾಯಿ ಇತ್ಯಾದಿ ತಿನಿಸುಗಳನ್ನು ನೀಡಿದರು.ನಂತರ ಗಜಲಕ್ಷ್ಮೀಗೆ ಮಂಗಳಾರತಿ ಬೆಳಗಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಎಇಒ ಎಸ್.ಜೆ. ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಅಚ್ಯುತ್ತ ಗೌಡ ಬಳ್ಪ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ಯಶಸ್ವಿಗೆ ತಿನಿಸನ್ನು ಉಣಬಡಿಸಿದರು. ಬಳಿಕ ಯಶಸ್ವಿಯು ಸೊಂಡಿಲನ್ನು ಎತ್ತಿ ಆಶೀರ್ವದಿಸಿತು. ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಮಾವುತ ಗುರುಪ್ರಸಾದ್ ಮಲ್ಲಿಗೆಮಜಲು ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article