
ನಾಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉತ್ಸವದಿಗಳು ಆರಂಭ
Tuesday, October 21, 2025
ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಆದಾಯದಲ್ಲಿ ರಾಜ್ಯದ ಮುಜರಾಯಿ ಇಲಾಖೆಯ ನಂಬರ್ ಒನ್ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅ.22 ರ ದೀಪಾವಳಿ ಬಲಿಪಾಡ್ಯಮಿ ದಿನದಂದು ಶ್ರೀ ದೇವರು ಹೊರಹೊಂಗಣ ಪ್ರವೇಶಿಸಲಿದ್ದಾರೆ.
ಆ ಮೂಲಕ ಶ್ರೀದೇವರ ಹೊರಂಗಣ ಉತ್ಸವದಿಗಳು ಆರಂಭವಾಗಲಿದೆ. ಬುಧವಾರ ಮಧ್ಯಾಹ್ನ ಮಹಾಪೂಜೆಯ ಬಳಿಕ ಶ್ರೀ ದೇವಳದಲ್ಲಿ ಗಜಪೂಜೆ ನೆರವೇರಲಿದೆ. ಸಂಜೆ ಗೋದೋಳಿ ಲಗ್ನದಲ್ಲಿ ಗೋಪೂಜೆ ನಡೆಯಲಿರುವುದು. ರಾತ್ರಿ ಮಹಾಪೂಜೆ ನಂತರ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ದೀಪಾರಾಧನೆಯುಕ್ತ ಪಾಲಕ್ಕಿ ಉತ್ಸವ ನಡೆಯಲಿರುವುದು.