ಪ್ರತಿಭಾ ಕಾರಂಜಿ: ಜಿಲ್ಲಾಮಟ್ಟಕ್ಕೆ ಆಯ್ಕೆ
Friday, November 28, 2025
ಬಂಟ್ವಾಳ: ಇಲ್ಲಿನ ಎಸ್‌ವಿಎಸ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನದ ಶಝ ಪಾತಿಮಾ ಪ್ರಥಮ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಹಿಂದಿ ಭಾಷಣ ಸ್ಪರ್ಧೆಯಲ್ಲಿ ಫಾತಿಮಾ ದ್ವಿತೀಯ ಸ್ಥಾನ ಪಡೆದು ಸರಕಾರಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಶಾಲಾ ಮುಖ್ಯಗುರುಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಭಾರತಿ ಕೈರಂಗಳ ತರಬೇತಿಯನ್ನು ನೀಡಿದ್ದು, ಶಿಕ್ಷಕರಾದ ಅಬ್ದುಲ್ ರಫೀಕ್, ಶರತ್ ಕುಮಾರ್, ಕ್ಷಮಾ ಕುಮಾರಿ, ಶುಭ, ಪವಿತ್ರ ಮತ್ತು ಅನಿಲ್ ಅವರು ಸಹಕರಿಸಿದ್ದಾರೆ.