ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಪ್ರಾರಂಭ

ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಪ್ರಾರಂಭ


ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳನ್ನು ಶುಕ್ರವಾರ ಪ್ರಾರಂಭಿಸಲಾಯಿತು. 

ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ತರಗತಿಯನ್ನು ಉದ್ಘಾಟಿಸಿ, ಸಮಾಜಕ್ಕೆ ಉತ್ತಮ ವ್ಯಕ್ತಿ, ಸುಂದರ ವ್ಯಕ್ತಿತ್ವವನ್ನು ನೀಡಲು ಅಡಿಪಾಯ ಅಂಗನವಾಡಿಯಲ್ಲಿ ಸಿಗುವ ಶಿಕ್ಷಣ. ಗಾಂಧಿನಗರ ಅಂಗನವಾಡಿ ಕೇಂದ್ರವು ಪುರಸಭೆ ವ್ಯಾಪ್ತಿಯಲ್ಲಿ ಮಾದರಿ ಅಂಗನವಾಡಿಯದ್ದು, ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸೌಮ್ಯಲತಾ ನಾಯ್ಕ್, ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭವ್ಯಾ, ಹಿರಿಯರಾದ ಸುಧಾ ಶೆಟ್ಟಿ, ಸ್ತ್ರೀ ಶಕ್ತಿ ಸದಸ್ಯೆ ರವಿಕಲಾ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಸಹಾಯಕಿ ಅಕ್ಷತಾ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article