ವಧಾಗೃಹ ಮರು ಪ್ರಾರಂಭಿಸದಂತೆ ಮನವಿ
Friday, November 28, 2025
ಮಂಗಳೂರು: ಕುದ್ರೋಳಿಯ ವಧಾಗೃಹವನ್ನು ಮತ್ತೆ ಪ್ರಾರಂಭಿಸದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ, ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಗೋರಕ್ಷಾ ಪ್ರಮುಖ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಸಹ ಕಾರ್ಯದರ್ಶಿ ನವೀನ್ ಕೊಣಾಜೆ ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆಗೆ ಸಂಬಂಧಿಸಿದ ಕುದ್ರೋಳಿಯಲ್ಲಿದ್ದ ಪ್ರಾಣಿಗಳ ವಧಾಗೃಹವು ಹಲವು ಕಾನೂನು ಮತ್ತು ನಿಯಮಾವಳಿಗಳನ್ನು ಪಾಲಿಸಲು ಅಷ್ಟು ಸಣ್ಣ ಸ್ಥಳ ಹಾಗೂ ಆ ಪ್ರದೇಶದಲ್ಲಿ ಕಾರ್ಯಾಚರಿಸಲು ಸಾಧ್ಯವಿಲ್ಲದ ಕಾರಣ ಅದನ್ನು ಮುಚ್ಚಲಾಗಿದೆ. ಮತ್ತು ಇದೆ ಕಾರಣಕ್ಕೆ ಬೇರೆ ಪ್ರದೇಶದ ವಿಸ್ತಾರವಾಗಿರುವ ಸ್ಥಳದಲ್ಲಿ ಸ್ಥಾಪಿಸಲು ಹಲವು ಪ್ರಯತ್ನ ನಡೆದಿದ್ದು ಕುದ್ರೋಳಿ ವಧಾಗೃಹವು ಆಯಕಟ್ಟಿನ ಪ್ರದೇಶದಲ್ಲಿ ಇರುವುದರಿಂದ ಅಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಸ್ಥಾಪಿತ ಹಿತಾಸಕ್ತಿ ಉಳ್ಳವವರಿಗೆ ಸುಲಭ ಸಾಧ್ಯವಾಗಿದ್ದು ವಧಾಗೃಹವನ್ನು ಮತ್ತೆ ಪ್ರಾರಂಭಿಸದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.