ಕಬ್ಬಿಣದ ಸೆಂಟ್ರಿಂಗ್ ಸೀಟ್ ಕಳವು
Friday, November 7, 2025
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಸುಲ್ತಾನ್ ನಗರ ಎಂಬಲ್ಲಿ ಹೊಸ ಮನೆ ನಿರ್ಮಾಣದ ಕಾಮಗಾರಿಯ ಹಿನ್ನಲೆಯಲ್ಲಿ ತಂದಿಟ್ಟಿದ್ದ 115 ಕಬ್ಬಿಣದ ಸೆಂಟ್ರಿಂಗ್ ಸೀಟನ್ನು ಕಳವುಗೈದ ಘಟನೆ ನಡೆದಿದೆ.
ಇಲ್ಲಿನ ಜಲೀಲ್ (41) ಅವರು ನಾವೂರು ಗ್ರಾಮದ ಸುಲ್ತಾನ್ ನಗರದಲ್ಲಿ ಹೊಸ ಮನೆ ನಿರ್ಮಾಣದ ಕೆಲಸದ ನಿಮಿತ್ತ 115 ಕಬ್ಬಿಣದ ಸೆಂಟ್ರಿಂಗ್ ಸೀಟನ್ನು ತಂದಿರಿಸಿದ್ದು,ಅ.9 ರಂದು ಮನೆ ಕೆಲಸ ನಡೆದಿತ್ತು.
ಮರುದಿನ ಬೆಳಗ್ಗೆ 8 ಗಂಟೆಗೆ ಕೆಲಸದ ಕಾರ್ಮಿಕರು ಬಂದಾಗ 115 ಕಬ್ಬಿಣದ ಸೆಂಟ್ರಿಂಗ್ ಸೀಟ್ ಗಳು ಕಳವಾಗಿರುವುದು ಕಂಡುಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ಕಬ್ಬಿಣದ ಸೆಂಟ್ರಿಂಗ್ ಸೀಟ್ ಗಳ ಮೌಲ್ಯ 70 ಸಾ.ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.