ಶಿರಿಯಾರ ಸೇವಾ ಸಂಘಕ್ಕೆ ವಂಚನೆ: ಶಾಖಾ ಮ್ಯಾನೇಜರ್ ಬಂಧನ
Tuesday, November 18, 2025
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಶಿರಿಯಾರದಲ್ಲಿನ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆಯಲ್ಲಿದ್ದ ಹೆಗ್ಗುಂಜೆ ಗ್ರಾಮದ ಜಾನುವಾರುಕಟ್ಟೆ ನಿವಾಸಿ ಸುರೇಶ್ ಭಟ್ (38) ಎಂಬಾತನನ್ನು ಸಂಸ್ಥೆಗೆ ವಂಚನೆ ಮಾಡಿದ ಆರೋಪದಲ್ಲಿ ಕೋಟ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಭಟ್ ಮತ್ತು ಸಂಘದ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಶಾಮೀಲಾಗಿ ಸಂಘಕ್ಕೆ 1.70 ಕೋಟಿ ರೂ. ಹಣ ವಂಚಿಸಿ, ತಲೆಮರೆಸಿಕೊಂಡಿದ್ದರು.
ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಮಾಸ್ತ ಹರೀಶ್ ಕುಲಾಲನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.