ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಂಘ ಧರ್ಮಸ್ಥಳಕ್ಕೆ ಪುರಪ್ರವೇಶ ನಾಳೆ
Tuesday, November 18, 2025
ಉಜಿರೆ: ಆಗಮಚಕ್ರವರ್ತಿ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ನೇತೃತ್ವದಲ್ಲಿ ದಿಗಂಬರ ಮುನಿಗಳ ಸಂಘ ಬುಧವಾರ ಅಪರಾಹ್ನ ನಾಲ್ಕು ಗಂಟೆಗೆ ಧರ್ಮಸ್ಥಳ ಪುರಪ್ರವೇಶ ಮಾಡಲಿದೆ.
ಶ್ರೀ ವಿದ್ಯಾಸಾಗರ ಮುನಿಮಹಾರಾಜರು, ನಿರ್ಯಾಪಕ ಸಮಾನ ಮಹಾರಾಜರು, ಪ್ರಶಾಂತ ಸಾಗರ ಮಹಾರಾಜರು, ಅವಿಚರಸಾಗರ್ ಮಹಾರಾಜ್, ಶಾಶ್ವತಸಾಗರ ಮಹಾರಾಜ್, ಆಧ್ಯಾತ್ಮಸಾಗರ್ ಮಹಾರಾಜ್, ಆಗಮಸಾಗರ ಮಹಾರಾಜ್, ಅನೇಕಾಂತ್ ಸಾಗರ ಮಹಾರಾಜ್, ನೇಮಿಸಾಗರ ಮಹಾರಾಜ್ ಮುನಿ ಸಂಘದಲ್ಲಿದ್ದಾರೆ.
ಬುಧವಾರ ಅಪರಾಹ್ನ ನಾಲ್ಕು ಗಂಟೆಗೆ ಧರ್ಮಸ್ಥಳದಲ್ಲಿ ಪ್ರೌಢಶಾಲಾ ಬಳಿ ಮುನಿಸಂಘವನ್ನು ಶ್ರಾವಕರು-ಶ್ರಾವಕಿಯರು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸುವರು.
ಬಳಿಕ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಬಳಿ ಇರುವ ಕುಟೀರದಲ್ಲಿ ಮುನಿಗಳು ಮಂಗಳ ಪ್ರವಚನ ನೀಡುವರು. ಗುರುವಾರ ಬೆಳ್ತಂಗಡಿ, ವೇಣೂರು ಮೂಲಕ ಮುನಿಗಳು ಮೂಡಬಿದ್ರೆಗೆ ವಿಹಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.