ನಾಳೆ ಲಕ್ಷದೀಪೋತ್ಸವ
Tuesday, November 18, 2025
ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಬಂದು ವೈವಿಧ್ಯಮಯ ಸೇವೆ ಮಾಡುತ್ತಾರೆ.
ರೈತರು ಬೆಳೆದ ತರಕಾರಿ, ದವಸಧಾನ್ಯಗಳನ್ನು ಅನ್ನದಾಸೋಹಕ್ಕೆ ಕಾಣಿಕೆಯಾಗಿ ಅರ್ಪಿಸುತ್ತಾರೆ.
ಬೆಂಗಳೂರಿನ ಹೂವಿನ ವ್ಯಾಪಾರಿಗಳು ಎಲ್ಲಾ ಜಾತಿಯ ವೈವಿಧ್ಯಮಯ ಹೂವು, ಎಲೆ, ತರಕಾರಿ, ಸೀಯಾಳ, ತೆಂಗಿನ ಕಾಯಿ ತಂದು ಬೀಡು, ದೇವಸ್ಥಾನ, ಅನ್ನಪೂರ್ಣ ಭೋಜನಾಲಯವನ್ನು ವಿವಿಧ ಆಕರ್ಷಕ ವಿನ್ಯಾಸಗಳಿಂದ ಅಲಂಕರಿಸಿದ್ದಾರೆ.
ಮಂಜೂಷಾ ವಸ್ತುಸಂಗ್ರಹಾಲಯ, ಕಾರ್ ಮ್ಯೂಸಿಯಂ, ತಾಳೆಗರಿ ಗ್ರಂಥಾಲಯ, ಲಲಿತೋದ್ಯಾನ, ಬಾಹುಬಲಿ ಬೆಟ್ಟ, ಅಣ್ಣಪ್ಪ ಸ್ವಾಮಿ ಬೆಟ್ಟ, ಜಮಾ ಉಗ್ರಾಣ, ಭಗವಾನ್ ಚಂದ್ರನಾಥಸ್ವಾಮಿ ಬಸದಿ, ನೆಲ್ಯಾಡಿಬೀಡು ಮೊದಲಾದ ಪ್ರೇಕ್ಷಣಿಯ ತಾಣಗಳನ್ನು ವೀಕ್ಷಿಸಿ ಅನ್ನದಾಸೋಹದೊಂದಿಗೆ ಜ್ಞಾನದಾಸೋಹದ ಸೊಗಡನ್ನೂ ಆಸ್ವಾದಿಸಿ ಆನಂದಿಸುತ್ತಿದ್ದಾರೆ.