ಕುಂದಾಪುರ ದೀಪೋತ್ಸವ: ಪೊಲೀಸರ ಮನವಿ

ಕುಂದಾಪುರ ದೀಪೋತ್ಸವ: ಪೊಲೀಸರ ಮನವಿ

ಕುಂದಾಪುರ: ನಗರದ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವವು ನ.19 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸುತ್ತಾರೆ.

ಈ ಸಮಯ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಿಂದ ನ್ಯೂ ಬಸ್ ಸ್ಟ್ಯಾಂಡ್ ತನಕ ಸಂಜೆ 5 ಗಂಟೆಯಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ದಟ್ಟ ಜನ ಸಂಚಾರ ಇರುವುದರಿಂದ ಈ ಸಮಯ ಕುಂದಾಪುರ ಮುಖ್ಯ ರಸ್ತೆಗೆ ಬರುವ ಎಲ್ಲಾ ಬಸ್ ಹಾಗೂ ಇತರ ವಾಹನಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಂದಾಪುರ ಗಾಂಧಿ ಮೈದಾನ, ಎಪಿಎಂಸಿ ಕಚೇರಿಯ ಮುಂಭಾಗ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಯಾರೂ ಸಹ ತಮ್ಮ ವಾಹನವನ್ನು ಕುಂದಾಪುರ ಮುಖ್ಯ ರಸ್ತೆ ಒಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ಕುಂದಾಪುರ ನಗರ ಮತ್ತು ಕುಂದಾಪುರ ಸಂಚಾರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article