ಮೂಡುಬಿದಿರೆ: ಉಚಿತ ಸಾರ್ವಜನಿಕ ವೈದ್ಯಕೀಯ ತಪಾಸಣೆ ಶಿಬಿರ
ಪುರಸಭಾ ಸದಸ್ಯ ಪಿ.ಕೆ.ಥೋಮಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ನಡೆಯುತ್ತಿರುವ ಆರೋಗ್ಯ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪ್ರಿಯದರ್ಶಿನಿ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ಗ್ರಾಹಕರ ಸಹಕಾರದಿಂದ ಸಂಸ್ಥೆಯು ಉತ್ತಮವಾಗಿ ಅಭಿವೃದ್ಧಿಯನ್ನು ಹೊಂದುತ್ತಿದ್ದು, ಇದರ ಪರಿಣಾಮವಾಗಿ ಸಂಸ್ಥೆಯ ಸರ್ವಾಂಗೀಣ ಸಾಧನೆಯನ್ನು ಪರಿಗಣಿಸಿ ಅಖಿಲ ಭಾರತ ಸಹಕಾರ ಸಪ್ತಾಹ- 2025ರ ಸಂರ್ಭದಲ್ಲಿ ಸಂಸ್ಥೆಯು ದ.ಕ ಜಿಲ್ಲೆಯ “ಉತ್ತಮ ಪತ್ತಿನ ಸಹಕಾರ ಸಂಘ” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗ್ರಾಹಕರ ಹಾಗೂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಸದಾ ಸಮಾಜಮುಖಿ ಸೇವೆಯಲ್ಲಿ ಜಂಟಿ ಸಂಸ್ಥೆಗಳೊಂದಿಗೆ ಸದಾ ಕೈಜೋಡಿಸಲು ನಮ್ಮ ಸಂಸ್ಥೆ ಸದಾ ಸಿದ್ದವಾಗಿರುತ್ತದೆ ಎಂದು ಹೇಳಿದರು.
ಗೌರವ:
ಹಿರಿಯ ಸಹಕಾರಿಗಳಾದ ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಹಾಗೂ ನೆಲ್ಲಿಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಜೈನ್ ಇವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ ಮೌಂಟ್ ರೋಸರಿ ಆಸ್ಪತ್ರೆಯ ನಿರ್ದೇಶಕಿ ಸಿಸ್ಟರ್ ಪ್ರೇಸಿಲ್ಲ ಡಿಮೆಲ್ಲೊ, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಅಮಿತ್ ಡಿಸಿಲ್ವಾ, ಮೌಂಟ್ ರೋಸರಿ ಆಸ್ಪತ್ರೆಯ ವೈದ್ಯರುಗಳಾದ ಪುನೀತ್ ಜಿ.ಪಕ್ಕಳ, ಎಲ್‌ರಾಯ್ ಸಲ್ದಾನ, ಮುಖಯಿಂದ್, ಪಾವನ ಆರ್.ಶೆಟ್ಟಿ ಹಾಗೂ ಶ್ರೇಯಾ ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ಮೂಡುಬಿದಿರೆ ಶಾಖೆಯ ಪ್ರಬಂಧಕಿ ಅಭಿಷ್ಟ ಜೈನ್ ಸ್ವಾಗತಿಸಿದರು. ಆಸ್ಪತ್ರೆ ಸಿಬ್ಬಂದಿ ಸುಧಾಕರ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು, ಜಾಯ್ಲಿನ್ ಕಾರ್ಡರೋ ವಂದಿಸಿದರು.