ಅಕ್ರಮ ಗೋ ಹತ್ಯೆ: ರಾಜಕೀಯ ಒತ್ತಡಕ್ಕೆ ಪೋಲಿಸ್ ಇಲಾಖೆ ಮಣಿಯದಂತೆ ಅಗ್ರಹ

ಅಕ್ರಮ ಗೋ ಹತ್ಯೆ: ರಾಜಕೀಯ ಒತ್ತಡಕ್ಕೆ ಪೋಲಿಸ್ ಇಲಾಖೆ ಮಣಿಯದಂತೆ ಅಗ್ರಹ

ಕಾರ್ಕಳ: ನಲ್ಲೂರು ಅಕ್ರಮ ಗೋ ಹತ್ಯೆಯ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯದೆ ಪೋಲಿಸ್ ಇಲಾಖೆ ಆರೋಪಿಗಳ ಹೆಡೆಮುರಿಕಟ್ಟಿ ಸೂಕ್ತ ಕಾನೂನು ಕ್ರಮ ಕೈಗೊಳ್ಳವಂತೆ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ

ನಲ್ಲೂರಿನ ಪರಿಸರದಲ್ಲಿ ನಡೆದಿರುವ ಅಕ್ರಮ ಹಾಗೂ ವ್ಯವಸ್ಥಿತ ಗೋ ಹತ್ಯೆ ದಂಧೆಯ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಪ್ರತಿ  ಬಾರಿ ಗೋ ರಕ್ಷಣೆಯ ಕಾರ್ಯ ಮಾಡುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ಇಂತಹ ಅಕ್ರಮ ಗೋ ಹತ್ಯೆ ದಂಧೆಗಳನ್ನು, ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಬಯಲು ಮಾಡುವುದು ನಮ್ಮ ಹಿಂದೂ ಕಾರ್ಯಕರ್ತರೇ ಎನ್ನುವುದನ್ನು ನಾವು ಗಮನಿಸಬೇಕಾದ ಅಂಶ 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ ಎನ್ನುವ ಭರವಸೆಯಿಂದ,  ಆರೋಪಿಗಳು ಕಾನೂನಿನ ಭಯವಿಲ್ಲದೆ ಇಷ್ಟು ರಾಜಾರೋಷವಾಗಿ ತನ್ನ ಮನೆಯಲ್ಲಿಯೇ ಅಕ್ರಮ ಗೋ ಮಾಂಸ ವ್ಯಾಪಾರ ಮಾಡುವ ದಂಧೆಯನ್ನು ನಡೆಸಿಕೊಡಿದ್ದರು. ಇಂತಹ ಅಕ್ರಮ ಗೋ ಮಾಂಸ ದಂಧೆಗಳಿಂದಲೇ ಗೋ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿರುವುದು. ಇಂತಹ ಅಕ್ರಮ ದಂಧೆಗಳನ್ನು ಮಟ್ಟಹಾಕಿದರೆ ಗೋ ಕಳ್ಳತನವು ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ಹೆಡೆಮುರಿಕಟ್ಟಿ, ಪೊಲೀಸ್ ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಕಳದಾದ್ಯಂತ ಇರುವ ಅಕ್ರಮ ಕಸಾಯಿಖಾನೆಗಳನ್ನು ಶೀಘ್ರವೇ ಪತ್ತೆ ಹಚ್ಚಿ ಅಕ್ರಮ ದಂಧೆ ಕೋರರನ್ನು ಬಂಧಿಸಿ,  ಅಕ್ರಮ ಕಸಾಯಿಖಾನೆಗಳನ್ನು ವಶಕ್ಕೆ ಪಡೆದು ಆರೋಪಿಗಳ ಆಸ್ತಿಯನ್ನು  ಮುಟ್ಟುಗೋಲು ಹಾಕಬೇಕು ಅವರು ಒತ್ತಾಯಿಸಿದ್ದಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article