ಕಾಡಾನೆ ಹಾವಳಿ ಅಪಾರ ಪ್ರಮಾಣದ ಕೃಷಿ ಹಾನಿ
Thursday, November 13, 2025
ಉಜಿರೆ: ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದಲ್ಲಿ ಬುಧವಾರ ಬೆಳಗಿನ ಜಾವ ಕಾಡಾನೆಗಳು ಸ್ಥಳೀಯ ತೋಟಗಳಿಗೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿವೆ.
ಇಲ್ಲಿನ ಮೇರಿ, ಭವಾನಿ, ಜೋಸೆಫ್, ಮಾಯಾ ಮೊದಲಾದವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು 200ಕ್ಕಿಂತ ಅಧಿಕ ಬಾಳೆ ಗಿಡ, 16 ತೆಂಗಿನ ಗಿಡ, 25ರಷ್ಟು ಅಡಿಕೆ ಗಿಡಗಳನ್ನು ನಾಶಪಡಿಸಿವೆ.
ಬೆಳಗಿನ ಜಾವ ವ್ಯಕ್ತಿಯೊಬ್ಬರು ರಬ್ಬರ್ ಟ್ಯಾಪಿಂಗ್ ಗೆ ತೆರಳುತ್ತಿದ್ದ ವೇಳೆ ತೋಟದಲ್ಲಿ ಮರಿಯಾನೆ ಸಹಿತ ಮೂರು ಆನೆಗಳನ್ನು ಹತ್ತಿರದಿಂದ ಕಂಡಿದ್ದಾರೆ. ಅವರು ತಕ್ಷಣ ಅಲ್ಲಿಂದ ಹಿಂದಿರುಗಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.ಮಂಗಳವಾರ ಸಂಜೆ ವೇಳೆ ಮುಂಡಾಜೆಯ ಮೃತ್ಯುಂಜಯ ನದಿ ಬದಿಯಲ್ಲಿ ಈ ಕಾಡಾನೆಗಳು ಕಂಡುಬಂದಿದ್ದು ನದಿ ಮೂಲಕವೇ ಚಾರ್ಮಾಡಿಯ ಕೊಳಂಬೆಯತ್ತ ಹೋಗಿವೆ ಎಂದು ಹೇಳಲಾಗಿದೆ.