ಜನಿವಾರ ತೆಗೆಸಿದ ಶಿಕ್ಷಕ ವಜಾ
Tuesday, November 18, 2025
ಕಾರ್ಕಳ: ಜನಿವಾರ, ಕೈಗೆ ಕಟ್ಟುವ ದಾರದ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅದನ್ನು ತೆಗೆಸಿದ ಆರೋಪದಲ್ಲಿ ಉಡುಪಿ ಜಿಲ್ಲೆ ಕಾರ್ಕಳದ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಅತಿಥಿ ಶಿಕ್ಷಕ ಮದರಶಾ ಎಸ್.ಮಕಾಂದರ್‌ನನ್ನು ಕರ್ತವ್ಯದಿಂದ ವಜಾಗೊಳಿಸಿದ ಘಟನ ಸೋಮವಾರ ನಡೆದಿದೆ.
ವಸತಿ ಶಾಲೆ ವಿದ್ಯಾರ್ಥಿಗಳಿಗೆ ನಿರಂತರ ಬಸ್ಕಿ ಹೊಡೆಸಿದ ಆರೋಪವೂ ಈ ಶಿಕ್ಷಕನ ಮೇಲಿದೆ. ಈತನನ್ನು ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ತರಾಟೆಗೆ ತಗೆದುಕೊಂಡು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಈ ಬಗ್ಗೆ ಶಿಕ್ಷಕನಿಗೆ ಹಲವು ಬಾರಿ ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಚಾಳಿ ಮುಂದುವರೆಸಿದ ವಿದ್ಯಾರ್ಥಿಗಳ ಜನಿವಾರ, ಕೈಗೆ ಕಟ್ಟುವ ದಾರವನ್ನು ತೆಗೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
ಮಕಾಂದರ್ ಮೂಲತ: ಕಲಬುರಗಿ ನಿವಾಸಿ, ದೈಹಿಕ ಶಿಕ್ಷಣ ಶಿಕ್ಷಕ. 2025ರ ಜೂನ್‌ನಿಂದ ಈ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ.