ಜನಿವಾರಕ್ಕೆ ಹಿಂದೂ ಧರ್ಮದಲ್ಲಿ ತನ್ನದೇ ಆದ ಪವಿತ್ರತೆ ಇದೆ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹಿಂದೂ ಧಾರ್ಮಿಕ ಭಾವನೆಗೆ ನಿಂದನೆ ಮಾಡಬೇಡಿ: ರಮಿತಾ ಸೂರ್ಯವಂಶಿ
Wednesday, November 19, 2025
ಕಾರ್ಕಳ: ಕಾರ್ಕಳ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ಮಕಾಂದರ್ ಎಂಬಾತರು ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹಿಂದೂ ಧಾರ್ಮಿಕ ಭಾವನೆಗೆ ನಿಂದನೆ ಮಾಡಿರೋದು ಗಮನಕ್ಕೆ ಬಂದಿದೆ, ಜನಿವಾರ ಧರಿಸಿದವರು ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ಇವರ ಮಾನಸಿಕತೆಯನ್ನು ಚಿಕ್ಕ ಮಕ್ಕಳ ಮೇಲೆ ಹೇರುವುದು ಮತ್ತು ದರ್ಪ ತೋರಿಸಿ ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುವುದು ಸರಿಯಲ್ಲ ಎಂದು ಸಮಾಜ ಸೇವಕಿ ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ.
ಜನಿವಾರ ಹಿಂದೂ ಧರ್ಮದಲ್ಲಿ ಧರಿಸುವ ಪವಿತ್ರ ದಾರವಾಗಿದ್ದು, ಇದು ಗಾಯತ್ರಿ ಮಂತ್ರವನ್ನು ಪಠಿಸುವ ಅರ್ಹತೆಯನ್ನು ಪಡೆಯುವುದರ ಸಂಕೇತವಾಗಿದೆ. ಇದರ ಮೂರು ಎಳೆಗಳು ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮತ್ತು ಶಿವನನ್ನು ಪ್ರತಿನಿಧಿಸುತ್ತವೆ. ಇದು ಕೇವಲ ಧಾರ್ಮಿಕ ಸಂಕೇತ ಮಾತ್ರವಲ್ಲದೆ, ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೂ ಸಹಾಯಕ ಎಂದು ನಂಬಲಾಗಿದೆ ಹಾಗಾಗಿ ಹಿಂದೂ ನಂಬಿಕೆಗೆ ಅವಮಾನವಾಗುವ ಘಟನೆ ನಡಿದದ್ದು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಇವರು ಮಕ್ಕಳಿಗೆ ಮತಂದ ನೀತಿ ಹೇರಿದಾಗೆ ಸಮಾಜಕ್ಕೆ ಭಾಸವಾಗುತ್ತಿದೆ ಹಾಗಾಗಿ ಇಂತಹ ಶಿಕ್ಷರು ಶಿಕ್ಷಣ ಕ್ಷೇತ್ರಕ್ಕೆ ಅನರ್ಹರು ಮಕಾಂದರ್ ಮೇಲೆ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.