'ಕಲಾ ನರ್ತನ ಡಾನ್ಸ್ ಕ್ರೀವ್ (ರಿ.) ಜನ್ನಾಡಿ' ನೃತ್ಯ ಸಂಸ್ಥೆಯ ಮಡಿಲಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Monday, November 3, 2025
ಕುಂದಾಪುರ: ಕುಂದಾಪುರ ತಾಲೂಕಿನ ಜನ್ನಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ಏಳು ವರುಷಗಳಿಂದ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾ,ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ಜಿಲ್ಲೆಯ ಅತ್ಯುತ್ತಮ ನೃತ್ಯ ತಂಡವಾಗಿ ಹೊರಹೊಮ್ಮಿದ ಈ ಸಂಸ್ಥೆ ಅಶಕ್ತರಿಗೆ ಸಹಾಯಧನ,ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು,ವಿದ್ಯಾರ್ಥಿ ವೇತನ ನೀಡುವುದರ ಮೂಲಕ ಸಮಾಜ ಮುಖಿ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ.
ಮನೀಷ್ ಕುಲಾಲ್ ನೀರ್ಜೆಡ್ಡು ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ 70ನೇ ಕರ್ನಾಟಕ ರಾಜ್ಯೋತ್ಸವ ಸುಸಂದರ್ಭದಲ್ಲಿ ಉಡುಪಿ ಜಿಲ್ಲಾಡಳಿತ ಮತ್ತು ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.
ಕಲಾ ನರ್ತನ ಸಂಸ್ಥೆಯ ಸ್ಥಾಪಕರಾದ ಮನೀಶ್ ಕುಲಾಲ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಸುಸಂದರ್ಭದಲ್ಲಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಲಾ ನರ್ತನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರೇಖಾ ಪ್ರಭಾಕರ್, ಕಾರ್ಯದರ್ಶಿ ಅರ್ಚನಾ ಸಂತೋಷ್ ಮತ್ತು ಪದಾಧಿಕಾರಿಗಳು, ನೃತ್ಯ ನಿರ್ದೇಶಕರಾದ ವಿಖ್ಯಾತ್ ಜಿ.ಕೆ., ಪೋಷಕರು, ವಿದ್ಯಾರ್ಥಿಗಳು, ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು.





