ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಕಂಬಳದ ಪ್ರಥಮ ಹಂತದ ಪೂವ೯ಭಾವಿ ಸಭೆ
Monday, November 3, 2025
ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ವೀರ–ವಿಕ್ರಮ ಜೋಡುಕರೆ ಕಂಬಳ ಹೊಕ್ಕಾಡಿಗೋಳಿ ಇದರ ಪ್ರಥಮ ಹಂತದ ಪೂರ್ವಭಾವಿ ಸಭೆಯು ಕಂಬಳ ಸಮಿತಿಯ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಂಬಳ ವಠಾರದಲ್ಲಿ ಭಾನುವಾರ ನಡೆಯಿತು.
ಡಿಸೆಂಬರ್ 21ರಂದು ಹೊಕ್ಕಾಡಿಗೋಳಿ ಕಂಬಳವು ವಿಜೃಂಭಣೆಯಿಂದ ಜರಗಲಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು. ಶೀಘ್ರದಲ್ಲಿ ಕಂಬಳದ ಆಮಂತ್ರಣ ಪತ್ರ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಮುಂದಿನ ವಾರ ಕರೆ ಮುಹೂರ್ತವು ನಡೆಯಲಿದ್ದು ಕಂಬಳಕ್ಕೆ ಸಹಕರಿಸುವ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು, ಭಜನಾ ಮಂಡಳಿಯ ಸದಸ್ಯರು, ಕಂಬಳಾಭಿಮಾನಿಗಳು ಕುದಿ ಕಂಬಳ ನಡೆಸಲು ಶ್ರಮದಾನದ ಮೂಲಕ ಕೈಜೋಡಿಸುವಂತೆ ವಿನಂತಿಸಲಾಯಿತು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಗೌರವ ಸಲಹೆ ಗಾರರು, ಕಾರ್ಯದರ್ಶಿ, ಉಪಾಧ್ಯಕ್ಷರುಗಳು, ಗೌರವನ್ವಿತ ಸದಸ್ಯರು , ಪದಾಧಿಕಾರಿಗಳು, ಊರ ಪ್ರಮುಖರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.
