ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನಿಂದ ‘ಶಕ್ತಿ ಪ್ರತಿಭಾ ಪರೀಕ್ಷಾ’ ಮೂಲಕ 1 ಕೋಟಿ ಸ್ಕಾಲರ್‌ಶಿಪ್ ಘೋಷಣೆ

ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನಿಂದ ‘ಶಕ್ತಿ ಪ್ರತಿಭಾ ಪರೀಕ್ಷಾ’ ಮೂಲಕ 1 ಕೋಟಿ ಸ್ಕಾಲರ್‌ಶಿಪ್ ಘೋಷಣೆ


ಮಂಗಳೂರು: ಮಂಗಳೂರಿನ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ 2026-27ನೇ ಸಾಲಿಗೆ ನೋಂದಣಿಯಾಗುವ ರಾಜ್ಯದ ಪ್ರತಿ ಜಿಲ್ಲೆಯ (SSLC/CBSE/ICSE) ಬೋರ್ಡ್‌ನ ವಿದ್ಯಾರ್ಥಿಗಳಿಗೆ ನವೆಂಬರ್ 9, 16, 23 ಹಾಗೂ 30ರಂದು ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನಿಂದ ‘ಶಕ್ತಿ ಪ್ರತಿಭಾ ಪರೀಕ್ಷಾ’ ಸ್ಕಾಲರ್‌ಶಿಪ್ ಪರೀಕ್ಷೆಯನ್ನು ನಡೆಸಲಾಗುತ್ತದೆ. 


ಈ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಬೋರ್ಡ್/ಸಿಬಿಎಸ್‌ಇ/ಐಸಿಎಸ್‌ಇ ಬೋರ್ಡ್‌ನಲ್ಲಿ 2025-26ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಇವರು 9 ಮತ್ತು 10ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಈ ಸ್ಕಾಲರ್ ಶಿಪ್ ಪರೀಕ್ಷೆ ಹಾಗೂ ಬೋರ್ಡ್ ಪರೀಕ್ಷೆಯ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೂ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. 

ಶಕ್ತಿ ಪದವಿ ಪೂರ್ವ ಕಾಲೇಜಿಗೆ ನೋಂದಣಿ ಬಯಸುವ ಒಟ್ಟು 150 ವಿದ್ಯಾರ್ಥಿಗಳಿಗೆ ಸುಮಾರು 1 ಕೋಟಿಯ ಸ್ಕಾಲರ್‌ಶಿಪ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೋಸ್ಕರ ನಮ್ಮ ವೆಬ್‌ಸೈಟ್ shakthi.edu.in ಅಥವಾ ಮೊಬೈಲ್ ಸಂಖ್ಯೆ 9686000046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article