ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಯೋಗ ಸಹಾಯಕ: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಯೋಗ ಸಹಾಯಕ: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ


ಮಂಗಳೂರು: ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ಪತಂಜಲಿ ಋಷಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗಗಳನ್ನು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ತನ್ನ ಜೀವನದಲ್ಲಿ ಅಳವಡಿಸಿಕೊಡಾಗ ಜೀವನ ಶೈಲಿಯು ಉತ್ತಮಗೊಳ್ಳುವುದು. ಆಸನಗಳು ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕ ಪ್ರತಿಬಂಧಕಗಳನ್ನು ತೆರವು ಗೊಳಿಸಲು ಸಹಾಯಕ ಎಂದು ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು.


ಅವರು ಇಂದು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ನವಂಬರ ತಿಂಗಳ ಯೋಗ ತರಗತಿಯ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ, ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಮುದ್ರೆಗಳ ಪ್ರಯೋಜನಗಳನ್ನು ತಿಳಿಸಿದರು.


ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಸಹಾಯಕ. ಯೋಗಾಭ್ಯಾಸವು ಮಾನವನಲ್ಲಿ ಅಳತೆ ಮತ್ತು ಪ್ರಮಾಣಗಳ ವಿವೇಕ ಜ್ಞಾನವನ್ನು ಮೂಡಿಸುತ್ತದೆ. ಪ್ರತಿ ದಿನವೂ ಬಿಡದೆ, ತಾಳ್ಮೆಯನ್ನು ಕುಂದಿಸದೆ ಹುರುಪಿನಿಂದ ಈ ಯೋಗಾಭ್ಯಾಸಕ್ಕೆ ನಮ್ಮ ದೇಹವನ್ನು ಒಳಪಡಿಸಿದಲ್ಲಿ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ಉತ್ತಮಗೊಂಡು ತನ್ನಲ್ಲಡಗಿರುವ ಚೈತನ್ಯ ಶಕ್ತಿಯನ್ನು ಹೊರಹೊಮ್ಮಿಸಿ ಆ ಮೂಲಕ ಜೀವಿತದ ಆಶಯವನ್ನು ನೆರವೇರಿಸಿಕೊಡುತ್ತದೆ ಎಂದು ತಿಳಿಸಿದರು. 


ರಾಮಕೃಷ್ಣ ಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರ ಯೋಗ ಜರುಗುತ್ತಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು. ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ, ದೈಹಿಕ ಆರೋಗ್ಯ ಚಿತ್ತ ಶಾಂತಿಗೆ ಯೋಗ ಸಹಕಾರಿ ಎಂಬ ಮಾಹಿತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸ ತುಕರಾಮ ಮತ್ತು ಪ್ರೇಮ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article