ಅಪಘಾತ: ದೂರು ದಾಖಲು
Monday, November 3, 2025
ಮಂಗಳೂರು: ಅ.31 ರಂದು ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಬೈಕಿನಲ್ಲಿ ಸಂಚರಿಸುವಾಗ ಕಾರೊಂದು ನಿರ್ಲಕ್ಷ್ಯದಿಂದ ಸಂಚರಿಸಿ ಢಿಕ್ಕಿ ಹೊಡೆದಿದ್ದು, ಇಬ್ಬರಿಗೂ ಗಾಯವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.
ದೂರುದಾರರಾದ ಮೊಹಿಯುದ್ದಿನ್ ಸಾಜೀದ್ ಅವರು ಮುಹಮ್ಮದ್ ಮಿದ್ಲಾಜ್ ಅವರೊಂದಿಗೆ ಬೈಕ್‌ನಲ್ಲಿ ಸಂಚರಿಸುವಾಗ ಬಿ.ಮೊಡ ಗ್ರಾಮದ ತಲಪಾಡಿ ಬಳಿ ಕಾರು ಚಾಲಕ ರಮೇಶ್ ರಾವ್ ಎಂಬುವವರು ನಿರ್ಲಕ್ಷ್ಯದಿಂದ ಸರ್ವಿಸ್ ರಸ್ತೆಗೆ ತಿರುಗುವಾಗ ಬೈಕ್‌ಗೆ ಢಿಕ್ಕಿ ಹೊಡೆದಿದ್ದು ಇದರ ಪರಿಣಾಮ ಇಬ್ಬರಿಗೂ ಗಾಯಗಳಾಗಿದ್ದು, ಮಿದ್ಲಾಜ್ ಅವರನ್ನು ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ,ಕ್ರ 145/2025 ಕಲಂ 281,125(a), BNS ನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.