ಅವಧಿ ಮೀರಿದ ಕಡತಗಳ ನಾಶ
Monday, November 3, 2025
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾಖಲಾದ ಪ್ರಕರಣಗಳಲ್ಲಿ 2016 ರ ಜನವರಿ 1 ರಿಂದ 2020 ರ ಡಿಸೆಂಬರ್ 31 ರ ಅವಧಿಯಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳ ಕಡತಗಳನ್ನು ನಾಶಪಡಿಸುತ್ತಿರುವುದರಿಂದ, ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಆಯೋಗ, ರಾಷ್ಟ್ರೀಯ ಆಯೋಗ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಮೇಲ್ಮನವಿ ಸಲ್ಲಿಸಿರುವ ಅಥವಾ ತಡೆಯಾಜ್ಞೆ ಇದ್ದರೆ, ಪ್ರಕರಣಗಳ ಮಾಹಿತಿಯನ್ನು ಈ ಕಛೇರಿಗೆ ನೀಡಬೇಕಿದೆ.
ದೂರುದಾರರು/ ಎದುರುದಾರರು/ ವಕೀಲರು ನವೆಂಬರ್ 27 ರೊಳಗೆ ಮೇಲ್ಕಂಡ ಅವಧಿಯ ಪ್ರಕರಣಗಳಲ್ಲಿ ಯಾವುದಾದರೂ ದಾಖಲಾತಿಗಳು, ಆದೇಶಗಳು ಮತ್ತು ಇತರ ದಾಖಲೆಗಳ ದೃಢೀಕೃತ ಪ್ರತಿಗಳು ಬೇಕಿದ್ದಲ್ಲಿ ಪಡೆದುಕೊಳ್ಳಲು ಮತ್ತು ಮೂಲದಾಖಲಾತಿಗಳಿದ್ದಲ್ಲಿ ವಾಪಾಸ್ಸು ಪಡೆಯಲು ಸೂಚಿಸಿದೆ. ನವೆಂಬರ್ 27 ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು(ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.