ತಿಮರೋಡಿ ಪ್ರತ್ಯಕ್ಷ: ನ್ಯಾಯಾಲಯಕ್ಕೆ ಹಾಜರು
Monday, November 3, 2025
ಮಂಗಳೂರು: ಕಳೆದ 50 ದಿನಗಳಿಂದ ನಾಪತ್ತೆಯಾಗಿ ಭೂಗತನಾಗಿದ್ದ ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕೊನೆಗೂ ಪ್ರತ್ಯಕ್ಷನಾಗಿದ್ದು ಇಂದು ಬೆಳ್ತಂಗಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರಿಕಾಲ್ ಮಾಡಿ ತೆರಳಿದ್ದಾರೆ.
ಕಳೆದ ವರ್ಷ ಉಜಿರೆಯಲ್ಲಿ ಸೌಜನ್ಯ ಪರವಾದ ಬ್ಯಾನರ್‌ನ್ನು ಅನಧಿಕೃತವಾಗಿ ಹಾಕಲಾಗಿದ್ದು ಈ ಹಿನ್ನಲೆಯಲ್ಲಿ ತಿಮರೋಡಿ ಸೇರಿ ಆರು ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರೂ ಜಾಮೀನು ಪಡೆಯದೆ ತಿರುಗಾಡುತ್ತಿದ್ದ ತಿಮರೋಡಿಗೆ ಬೆಳ್ತಂಗಡಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು. ಹೀಗಾಗಿ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರಿಕಾಲ್ ಮಾಡಿ ತೆರಳಿದ್ದಾರೆ.