ಸಾಮೂಹಿಕ ವಂದೇ ಮಾತರಂ ಗಾಯನ

ಸಾಮೂಹಿಕ ವಂದೇ ಮಾತರಂ ಗಾಯನ


ಮಂಗಳೂರು: ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸಾಮೂಹಿಕವಾಗಿ ವಂದೇ ಮಾತರಂ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ,  ವಂದೇ ಮಾತರಂ ರಾಷ್ಟ್ರೀಯ ಗೀತೆಯ 150 ವರ್ಷಗಳನ್ನು ಸ್ಮರಿಸಲು ದೇಶಾದ್ಯಂತ ’ವಂದೇ ಮಾತರಂ’ಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆ ದೇಶ ಪ್ರೇಮದ ಭಾವವನ್ನು ಸಾರುವ ವಂದೇ ಮಾತರಂ ಗೀತೆಯ ಮಹತ್ವ ಎಲ್ಲರಿಗೂ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.

ಶಾಸಕರಾದ  ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ , ಪ್ರತಾಪ್ ಸಿಂಹ ನಾಯಕ್ , ಕಿಶೋರ್ ಕುಮಾರ್ , ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕರಾದ ಕ್ಯಾ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್, ವಂದೇ ಮಾತರಂ ಕಾರ್ಯಕ್ರಮದ ರಾಜ್ಯ ಸಹ ಸಂಚಾಲಕರಾದ ಶ್ಯಾಮಲಾ ಕುಂದರ್, ಬಿಜೆಪಿ ಪದಾಧಿಕಾರಿಗಳಾದ ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ಸುನಿಲ್ ಆಳ್ವ, ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಡಾ ಮಂಜುಳಾ ರಾವ್ ಸ್ವಾಗತಿಸಿ, ರಮೇಶ್ ಹೆಗ್ಡೆ ವಂದಿಸಿದರು. ಸುಜಿತ್ ಪ್ರತಾಪ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article