ಮಂಗಳೂರಿನ ಅಧಿಕೃತ ವಧಾಗೃಹ ಕುದ್ರೋಳಿ ಕಸಾಯಿಖಾನೆ ತೆರೆಯಲು ಕ್ರಮ ಕೈಗೊಳ್ಳದೆ ಬಡ ವ್ಯಾಪಾರಸ್ಥರ ಮೇಲೆ ಕ್ರಮ ಏಕಪಕ್ಷೀಯ ತೀರ್ಮಾನ ಹಿಂಪಡೆಯಿರಿ: ಬಿ.ಕೆ. ಇಮ್ತಿಯಾಜ್

ಮಂಗಳೂರಿನ ಅಧಿಕೃತ ವಧಾಗೃಹ ಕುದ್ರೋಳಿ ಕಸಾಯಿಖಾನೆ ತೆರೆಯಲು ಕ್ರಮ ಕೈಗೊಳ್ಳದೆ ಬಡ ವ್ಯಾಪಾರಸ್ಥರ ಮೇಲೆ ಕ್ರಮ ಏಕಪಕ್ಷೀಯ ತೀರ್ಮಾನ ಹಿಂಪಡೆಯಿರಿ: ಬಿ.ಕೆ. ಇಮ್ತಿಯಾಜ್

ಮಂಗಳೂರು: ಮಂಗಳೂರಿನ ಮಾಂಸ ಪ್ರಿಯರಿಗೆ ಕಳೆದ ಹಲವಾರು ವರ್ಷಗಳಿಂದ ಕುದ್ರೋಳಿ ಕಸಾಯಿಖಾನೆ ಮಾಂಸಹಾರಿಗಳಿಗೆ ಸಂಸ್ಕರಿತ ಆಡು,ದನ ಕುರಿ ಮಾಂಸಗಳನ್ನು ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ.

ಮುಸ್ಲಿಂ ಮಾಂಸ ವ್ಯಾಪಾರಿಗಳು ಕುದ್ರೋಳಿ ಕಸಾಯಿಖಾನೆಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಸಾಯಿಖಾನೆಯ ನಿರ್ವಹಣೆ ಮಾಡುತ್ತಾ ನಗರದ ಮತ್ತು ಹೊರಭಾಗದ ಸಣ್ಣ ವ್ಯಾಪಾರಿಗಳು ಮಾಂಸ ವ್ಯಾಪಾರದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು ಮತ್ತು ನಗರಪಾಲಿಕೆಗೂ ಆದಾಯ ಮಾಡಿ ಕೊಡುತ್ತಿದ್ದರು.

ಬಿಜೆಪಿ ನಗರಾಡಳಿತ ಇದ್ದ ಕಾಲದಲ್ಲಿ ದನದ ಮಾಂಸ ನಿಷೇಧಿಸುವ ಮತ್ತು ಸಂಘಪರಿವಾರದ ಕೋಮುವಾದಿ ಅಜೆಂಡಾವನ್ನು ಜಾರಿಗೊಳಿಸಲು ಕುದ್ರೋಳಿ ಕಸಾಯಿಖಾನೆಯನ್ನು ವ್ಯವಸ್ಥಿತವಾಗಿ ಮುಚ್ಚಿದ್ದಾರೆ. ಇದು ಮಂಗಳೂರಿನಲ್ಲಿ ಸರಕಾರ ಸಂಘಿಗಳ ನಿಯಂತ್ರಣದಲ್ಲಿದೆ ಎನ್ನುವುದಕ್ಕೆ ಒಂದು ಸಾಕ್ಷಿ ಹೇಳುತ್ತದೆ.

ಮಂಗಳೂರಿನಲ್ಲಿ ದನ ಮಾರಾಟಗಾರರು, ದಲ್ಲಾಳಿಗಳು, ಸಾಗಾಟಗಾರರು, ದನದ ಮಾಂಸ ತಿನ್ನುವವರು ಎಲ್ಲರೂ ಮುಸ್ಲಿಮರಲ್ಲ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಕುರಿ ಆಡು ವಧೆ ಮಾಡುವುದಕ್ಕೆ ಜಾನುವಾರು ವಧಾ ಕಾಯಿದೆ ಅನ್ವಯಿಸುವಂತೆ ಪೊಲೀಸರು ಕ್ರಮ ವಹಿಸಿದ್ದರೆ ಬಿಜೆಪಿಯ ಪರವಾಗಿರುವವರು ಸೇರಿದಂತೆ ಎಲ್ಲಾ ಧರ್ಮಗಳ ಮಂಗಳೂರಿನ ಅನೇಕ ಶ್ರೀಮಂತರು ಜೈಲಿಗೆ ಹೋಗುತ್ತಿದ್ದರೋ ಏನೋ? ಅದೆಷ್ಟು ಮಂದಿಯ ಭವ್ಯ ಬಂಗಲೆಗಳು ಮುಟ್ಟುಗೊಲು ಆಗುತ್ತಿತ್ತೋ ಏನೋ?

ಅಲ್ಲಲ್ಲಿ ಪೊಲೀಸರು ಮಾಂಸಕ್ಕಾಗಿ   ಬಳಸುವ ಜಾನುವಾರುಗಳ ವಧೆ ಮಾಡಿ ಮಾರಾಟ ಮಾಡುವ ಕಸುಬು ಮಾಡಿಕೊಂಡಿರುವ ಬಡ ವ್ಯಾಪಾರಿಗಳನ್ನು ಭಯೋತ್ಪಾದಕರು ಎಂಬಂತೆ ಚಿತ್ರೀಕರಿಸಿ ಜೈಲಿಗೆ ಅಟ್ಟಲಾಗುತ್ತಿದೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ.

ಯಾವ ಸರಕಾರದಿಂದ ನಮಗೆ ರಕ್ಷಣೆ ಸಿಗಬಹುದು ಎಂದು ಭರವಸೆಯಲ್ಲಿದ್ದ ಸಮುದಾಯದ ಜನರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರ ಪ್ರಾರ್ಥನಾ ಸ್ಥಳವಾದ ಮಸೀದಿಗೆ ಪೊಲೀಸರು ತೆರಳಿ ಕಾನೂನಿನ ಪಾಠ ಹೇಳುತ್ತಿದ್ದಾರೆ.

ಕೆಲವೆಡೆ ದನ ಹಿಡಿಯುವ ಪೋಲೀಸರ ಕಾರ್ಯಚರಣೆಯಲ್ಲಿ ಸಂಘ ಪರಿವಾರ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದರೆ ಜಿಲ್ಲಾಡಳಿತ ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ಜನರಿಗೆ ಬಿಡಿಸಿ ಹೇಳಬೇಕಾಗಿಲ್ಲ.

ಮೊದಲು ಮಂಗಳೂರಿನ ಅಧಿಕೃತ ಕಸಾಯಿಖಾನೆಯ ಬೀಗ ತೆರೆಯಲು ಕ್ರಮ ಕೈಗೊಳ್ಳಿ...

ಅಧಿಕೃತ ವಧಾಗೃಹ ಮುಚ್ಚಿ ಬಡವರ ಮನೆಗಳಿಗೆ ನುಗ್ಗಿ ಬಡವರ ಮೇಲೆ ಕಾನೂನಿನ ಬಲ ಪ್ರಯೋಗ ಮಾಡುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ, 

ಕುದ್ರೋಳಿ ಕಸಾಯಿಖಾನೆ ತೆರೆಯಲು ಕಾಂಗ್ರೆಸ್ ಸರಕಾರ ವಿಫಲರಾದರೆ ಸರಕಾರದ ವಿರುದ್ದ ತೀವ್ರ ಹೋರಾಟ ಮಾಡಬೇಕಾಗುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article