ಬಂಟ್ವಾಳದಲ್ಲಿ ‘ಶ್ರೀ ಲಕ್ಷ ದೀಪೋತ್ಸವವು’ ಸಂಪನ್ನ
ಬೆಳಗ್ಗೆ ನಿರ್ಮಲ್ಯ ವಿಸರ್ಜನೆ, ಅಭಿಷೇಕಾದಿಗಳು, ಸಹಸ್ರನಾಮ ಆರತಿ, ಪುಳಕಾಭಿಷೇಕದ ಆರತಿ, ನಂತರ ಮಹಾ ನೈವೇದ್ಯ, ಮಂಗಳಾರತಿ, ಹತ್ತು ಸಮಸ್ತರಿಂದ ಪ್ರಾರ್ಥನೆಯ ಬಳಿಕ ಶ್ರೀ ದೇವರು ವನಕ್ಕೆ ಚಿತ್ರೈಸಿತು.
ವನದಲ್ಲಿ ಧಾತ್ರಿಹವನ ,ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 3ಕ್ಕೆ ಮಹಾ ನೈವೇದ್ಯ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ‘ವನಭೋಜನ’ ನೆರವೇರಿತು.
ರಾತ್ರಿ ಪೂಜೆಯಾಗಿ ಉತ್ಸವ ಆರಂಭಗೊಂಡಿತು, ಶ್ರೀ ದೇವರು ದೇವಳದ ಕನ್ನಡ ಮಾಧ್ಯಮ ಶಾಲೆಗೆ ಚಿತ್ತೈಸಿ ಪೂಜೆ, ಸಣ್ಣ ಗುರ್ಜಿಯಲ್ಲಿ ಪೂಜೆಯ ನಂತರ ಪೇಟೆ ಸವಾರಿ ನಡೆಯಿತು.
ಸಣ್ಣಗುರ್ಜಿಯಿಂದ ಬೆಳ್ಳಿ ಪಲ್ಲಕಿಯಲ್ಲಿ ಶ್ರೀದೇವರ ಪೇಟೆ ಸವಾರಿ ಕೊಟ್ರಮಣಗಂಡಿ ವರೆಗೆ ತೆರಳಿ ಅಲ್ಲಿಂದ ಬಡ್ಡಕಟ್ಟೆ ಶ್ರೀ ಹನುಮಂತ ದೇವಸ್ಥಾನದವರೆಗೆ ಸಂಚರಿಸಿ ಅಲ್ಲಿಕಟ್ಟೆ ಪೂಜೆಯಾಗಿ ವಾಪಾಸ್ ಅದೇ ದಾರಿಯಾಗಿ ಬಂದು ಭಾಮಿ ಜಂಕ್ಷನ್‌ನಲ್ಲಿ ದೊಡ್ಡ ಗುರ್ಜಿಯಲ್ಲಿ ಚಿತ್ತೈಸಿತು.
ಈ ಸಂದರ್ಭ ಸ್ಥಳೀಯ ಕಲಾವಿದರಿಂದ ಭಜನಾ ಸಂಕೀರ್ತನೆ, ಶ್ರೀ ದೇವರಿಗೆ ಪ್ರಸನ್ನ ಪೂಜೆ ಲಕ್ಷ ಆರತಿ ಸೇವೆಯನ್ನು ಮುಗಿಸಿ ಶ್ರೀ ಮಹಮ್ಮಾಯ ದೇವಸ್ಥಾನ, ಶ್ರೀ ಕಾಶೀ ಮಠದಲ್ಲಿ ಪೂಜೆ ಬಳಿಕ ಶ್ರೀ ದೇವರು ಸಿಂಹಾಸನಕ್ಕೆ ಚಿತ್ರೈಸುವ ಕಾರ್ಯಕ್ರಮ ನಡೆಯಿತು.ಬೆಳ್ಳಿಯ ಪಲ್ಲಕಿಯಲ್ಲಿ ಭಜಕರು ಭುಜು ಸೇವೆಯ ಮೂಲಕವೇ ನಡೆಸಿದ್ದರು.