ನ.18 ರಂದು ಕಡಬದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ: ಡಿಸಿ, ಅರಣ್ಯಾಧಿಕಾರಿಗಳು ಆಗಮಿಸಿ ಸ್ಪಷ್ಟಉತ್ತರ ನೀಡಬೇಕು

ನ.18 ರಂದು ಕಡಬದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ: ಡಿಸಿ, ಅರಣ್ಯಾಧಿಕಾರಿಗಳು ಆಗಮಿಸಿ ಸ್ಪಷ್ಟಉತ್ತರ ನೀಡಬೇಕು


ಸುಬ್ರಹ್ಮಣ್ಯ: ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಬೇಡಿಕೆಗಳನ್ನು ಮುಂದಿರಿಸಿ ನ.18ರಂದು ಬೆಳಗ್ಗೆ ಕಡಬದ ತಾಲೂಕು ಕಚೇರಿ ಬಳಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್‌ಶಿರಾಡಿ ತಿಳಿಸಿದರು.

ಅವರು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಹಕ್ಕುಪತ್ರ ಪಡೆದುಕೊಂಡವರಿಗೆ ಹಕ್ಕುಪತ್ರ ಅನಾಧಿಕೃತ ಎಂದು ತಿಳಿಸಿ, ಜಾಗವನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ಸೂಚಿಸಲಾಗುತ್ತಿದೆ. ಅರಣ್ಯ ಹಾಗೂ ಕಂದಾಯ ನಡುವೆ ಸಮರ್ಪಕವಾಗಿ ಜಂಟಿ ಸರ್ವೇ ನಡೆಸದೇ, ಗಡಿ ಗುರುತು ಪ್ರಕ್ರಿಯೆ ನಡೆಸದೇ, ಪಶ್ಚಿಮ ಘಟ್ಟಹಾಗೂ ಗ್ರಾಮಗಳ ನಡುವೆ ಗಡಿ ಗುರುತು ಮಾಡದೇ ಇಂದು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ವಿರುದ್ಧ ನಮ್ಮ ಬೇಡಿಕೆಗಳಾದ ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕು, ಪಶ್ಚಿಮ ಘಟಕ್ಕೂ ಗಡಿಗುರುತು ಮಾಡಬೇಕು, ಕಂದಾಯ ಇಲಾಖೆ ನೀಡಿದ ಹಕ್ಕುಪತ್ರಗಳನ್ನು ಅಧಿಕೃತ ಮಾಡಬೇಕು ಎಂದು ಒತ್ತಾಯಿಸಿ ಹಕ್ಕೊತ್ತಾಯ ಸಭೆ ನಡೆಸಲಿದ್ದೇವೆ. ಈಗಾಗಲೇ ಹಕ್ಕಪತ್ರ ಪಡೆದು ರೈತರು ಸೊಸೈಟಿಗಳಲ್ಲಿ ಸಾಲ ಪಡೆದುಕೊಂಡಿದ್ದು, ಆ ಜಾಗ ಕೈತಪ್ಪಿ ಹೋದಲ್ಲಿ ಸಾಲ ಕಟ್ಟುವುದು ಹೇಗೆಂದು ಚಿಂತಿಸಬೇಕಾಗಿದೆ, ಆದ್ದರಿಂದ ಹಕ್ಕೊತ್ತಾಯ ಸಭೆಗೆ ತಾಲೂಕಿನ ಗ್ರಾಮಸ್ಥರು, ಸೊಸೈಟಿ ಪ್ರತಿನಿಧಿಗಳು, ಗ್ರಾಮ ಪಂಚಾಯತ್‌ಚುನಾಯಿತರು ಭಾಗವಹಿಸಬೇಕು ಎಂದ ಅವರು, ಹಕ್ಕೊತ್ತಾಯ ಸಭೆ ನಿಟ್ಟಿನಲ್ಲಿ ನ.11ರಂದು ಪ್ರತೀ ಗ್ರಾಮಗಳಿಗೆ, ಗ್ರಾ.ಪಂ.ಗಳಿಗೆ ಸಂಘಟನೆ ವತಿಯಿಂದ ಭೇಟಿ ನೀಡಿ ಜಾಗೃತಿ, ಅರಿವು ಕಾರ್ಯಮಾಡಲಾಗುವುದು ಎಂದರು.

ಡಿಸಿ ಬರಬೇಕು:

ಹಕ್ಕೊತ್ತಾಯ ಸಭೆ ಡಿಸಿ, ಎಸಿ, ಅರಣ್ಯ ಇಲಾಖೆಯ ಜಿಲ್ಲಾ ಅಧಿಕಾರಿಗಳು ಆಗಮಿಸಿ ಅರಣ್ಯ ಸಮಸ್ಯೆಗಳ ಬಗ್ಗೆ ಪರಿಹಾರದ ಸ್ಪಷ್ಟಉತ್ತರ ನೀಡಬೇಕು ಹಾಗೂ ಬೇಡಿಕೆಗಳನ್ನು ನಿಗಧಿತ ಸಮಯದಲ್ಲಿ ಬಗೆಹರಿಸುವ ಭರವಸೆ ನೀಡಿ, ಕಾರ್ಯಪ್ರವೃತರಾಗಬೇಕು ಎಂದು ಅವರು ಆಗ್ರಹಿಸಿದರು. ಅರಣ್ಯ ಇಲಾಖೆ ನೋಟೀಸ್‌ನೀಡಿರುವುದಕ್ಕೆ ಸ್ಪಷ್ಟನೆ ನೀಡಬೇಕು, ಜಿಲ್ಲೆಯ ಯಾವುದೇ ರೈತ, ಗ್ರಾಮಸ್ಥರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ್ ಕೂಜುಗೋಡು, ಆಚ್ಚುತ ಗೌಡ, ರಮಾನಂದ ಎಣ್ಣೆಮಜಲು, ದಾಮೋದರ ಗುಂಡ್ಯ ಸೇರಿದಂತೆ ವೇದಿಕೆಯ ಪ್ರಮುಖರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article