ಕಟೀಲಿನಲ್ಲಿ ದೀಪೋತ್ಸವ
Sunday, November 9, 2025
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ದೀಪೋತ್ಸವ ನಡೆಯಿತು. ಈ ಸಂದರ್ಭ ಒಳಾಂಗಣದಲ್ಲಿ ದೇವಸ್ಯ ಮತ್ತು ಕೊಡೆತ್ತೂರು ಗುತ್ತು ಕುಟುಂಬಿಕರು ಕಾಣಿಕೆಯಾಗಿ ಸಮರ್ಪಿಸಿದ ದೀಪದ ದಳಿಗಳಲ್ಲಿ ಸಹಸ್ರಾರು ದೀಪಗಳನ್ನು ಹೊತ್ತಿಸಲಾಯಿತು.
ರಥಬೀದಿ ಕುದ್ರು ಪ್ರದೇಶಗಳಲ್ಲಿ ಸಹಸ್ರಾರು ದೀಪಗಳನ್ನು ಬೆಳಗಿಸಲಾಯಿತು. ಚಂದ್ರಮಂಡಲದಲ್ಲಿ ದೇವರನ್ನು ಕುದ್ರು ವರೆಗೆ ಕೊಂಡೊಯ್ದು ಅಲ್ಲಿ ಫಲ ವಸ್ತು ತರಕಾರಿ ಗಳಿಂದ ನಿರ್ಮಿಸಲಾದ ಗುರ್ಜಿಯಲ್ಲಿ ದೇವರ ಪೂಜೆ ನಡೆಯಿತು.