ಕುಕ್ಕೆ: ನಾಳೆ ಬೆಳ್ಳಿರಥ ಸಮರ್ಪಣೆ

ಕುಕ್ಕೆ: ನಾಳೆ ಬೆಳ್ಳಿರಥ ಸಮರ್ಪಣೆ


ಸುಬ್ರಹ್ಮಣ್ಯ: ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾ ರೂಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥದ ಸಮರ್ಪಣೆ ಕಾರ್ಯಕ್ರಮ ನ.10ರಂದು ವಿಧಿ ವಿಧಾನಗಳೊಂದಿಗೆ ಜರುಗಲಿದೆ.

ಕೋಟೇಶ್ವರ ಬಿ. ಲಕಷ್ಮಿನಾರಾಯಣ ಆಚಾರ್ಯರು ಮತ್ತು ಗೋಪಾಲಾಚಾರ್ಯ ಅವರು ನಿರ್ಮಿಸಿಕೊಟ್ಟ ಬೆಳ್ಳಿರಥ ಬುಧವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿತ್ತು. ಬೆಳ್ಳಿರಥವನ್ನು ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಅಂಗವಾಗಿ ರವಿವಾರ ಸಂಜೆ ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕಲಶ, ವಾಸ್ತು ಬಲಿ ಮತ್ತು ವಾಸ್ತು ಪೂಜೆ ಜರುಗಿತು. ಅರ್ಚಕರು ಪೂಜಾ ವಿಧಾನಗಳನ್ನು ನೆರವೇರಿಸಿದರು.

ಎಒಎಲ್‌ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ಮನೆಯವರಾದ ಡಾ. ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ. ಅಬಿಜ್ನಾ ಗೋಕುಲ್, ಗೋಕುಲ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸದಸ್ಯರು, ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರು, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

ನಾಳೆ ಸಮರ್ಪಣೆ:

ನ.10 ರಂದು ಬೆಳಗ್ಗೆ ಗಂಟೆ 7ರಿಂದ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ನಡೆಯಲಿದೆ. ಪೂರ್ವಾಹ್ನ ಗಂಟೆ 11ಕ್ಕೆ ಪೂರ್ಣಾಹುತಿಗೊಂಡು, ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಲಾಗುತ್ತದೆ. ರಾತ್ರಿ ಗಂಟೆ ೮ಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರ ಹೆಸರಿನಲ್ಲಿ ಪ್ರಥಮ ಬೆಳ್ಳಿರಥ ಸೇವೆ ಜರುಗಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article