ಕದ್ರಿ ಪಾರ್ಕ್ ಬೀದಿ ಬದಿ ವ್ಯಾಪಾರಿಗಳ ತೆರವು: ಸಿಐಟಿಯು ಪ್ರತಿಭಟನೆ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕದ್ರಿ ಪಾರ್ಕಿಗೆ ಬರುವ ವಿಹಾರಿಗಳಿಗೆ ತಂಪು ತಂಪಾದ ಪಾನೀಯ ನೀಡಿ, ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಬೀದಿ ವ್ಯಾಪಾರಿಗಳ ಮೇಲೆ ಕಾನೂನು ಬಾಹಿರ ಧಾಳಿ ಮಾಡುತ್ತಿದ್ದರೂ ಜನಪ್ರತಿನಿದಿನಗಳು ಮೌನ ವಹಿಸುತ್ತಿದ್ದಾರೆ ಬಡ ಬೀದಿ ವ್ಯಾಪಾರಿಗಳನ್ನು ಅಪರಾದಿಗಳಂತೆ ಬಿಂಬಿಸಿ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಧಾಳಿ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ, ಕದ್ರಿ ಪಾರ್ಕಿನಲ್ಲಿ ಕಳೆದ 30 ವರ್ಷಗಳಿಂದ ಬೀದಿಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ವ್ಯಾಪಾರಿಗಳನ್ನು ಇತ್ತೀಚಿಗೆ ನಗರ ಪಾಲಿಕೆ ಅಧಿಕಾರಿಗಳು ಯಾವುದೇ ನೋಟೀಸ್ ನೀಡದೆ ಏಕಾಏಕಿ ಧಾಳಿ ನಡೆಸಿ ಅವರ ಸರಕು, ಮತ್ತು ಗಾಡಿಗಳನ್ನು ವಶಪಡಿಸಿಕೊಂಡಿರುವುದು ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲೆ ಸವಾರಿ ಮಾಡಿದಂತಾಗಿದೆ ಎಂದರು.
ಏರ್ ಪೋರ್ಟ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಏರ್ ಪೋರ್ಟ್ ರಸ್ತೆಯನ್ನು ಬೀದಿ ವ್ಯಾಪಾರ ನಿಷೇಧ ರಸ್ತೆ ಎಂದು ಆದೇಶ ನೀಡಿರುವುದರಿಂದ ಏರ್ ಪೋರ್ಟ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳಿಗೆ ತೀವ್ರ ಸಂಕಷ್ಟ ತಂದೊಡ್ಡಲಿದೆ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ಪಾಲಿಕೆ ಅಧಿಕಾರಿಗಳ ಧಾಳಿಯ ಭೀತಿಯಿಂದ ಕಂಗಾಲಾಗಿದ್ದಾರೆ ಬಡವರು ರಾಜ ಮಾರ್ಗದಲ್ಲಿ ಹೊಟ್ಟೆಪಾಡಿಗೆ ದುಡಿಮೆ ಮಾಡಬಾರದೇ ಎಂದು ಪ್ರಶ್ನಿಸಿದರು.
ಕಾರ್ಮಿಕ ಮುಂದಾಳು ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ಮುಂದಾಳುಗಳಾದ ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಸಂಘದ ನಾಯಕರಾದ ಸಂತೋಷ್ ಆರ್. ಎಸ್, ಮುಜಾಫರ್ ಅಹ್ಮದ್, ಹಂಝ ಮೊಹಮ್ಮದ್,ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ಸ್ಟ್ಯಾನಿ ಡಿಸೋಜಾ, ವಿಶ್ವನಾಥ್ ಕದ್ರಿ, ಗಂಗಾಧರ್ ಕದ್ರಿ, ಬ್ರಹ್ಮ ಪುತ್ರ, ವಿಶ್ವರಾಜ್, ರಾಜೀವಿ, ಶಾಲಿನಿ, ಗಂಗಮ್ಮ, ಶೈಲಾ ಸುರತ್ಕಲ್, ಫೇಲಿಕ್ಸ್ ಸುರತ್ಕಲ್, ಬಾಲಕೃಷ್ಣ,ವಿಜಯ್ ಜೈನ್, ಸಿಕಂದರ್ ಬೇಗ್, ಕಾಜ ಮೋಹಿಯುದ್ದಿನ್, ರಫೀಕ್ ಪಾಂಡೇಶ್ವರ, ನೌಶಾದ್ ಕಣ್ಣೂರು, ರಿಯಾಜ್ ಮದಕ, ರಾಮಚಂದ್ರ ಭಟ್,ಚಂದ್ರಹಾಸ್ ಪಡೀಲ್ ಗುಡ್ಡಪ್ಪ, ಸೆಲ್ವಾ ರಾಜ್, ಮುಂತಾದವರು ಉಪಸ್ಥಿತರಿದ್ದರು.
ಪಾಲಿಕೆಯ ಅಧಿಕಾರಿಗಳಾದ ಮಾಲಿನಿ ಮತ್ತು ಚಿತ್ತರಂಜನ್ ಮನವಿ ಸ್ವೀಕರಿಸಿದರು.