ಕ್ಯಾಂಪ್ಕೋ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
ಮಂಗಳೂರು: ಅಡಕೆ ಬೆಳೆಗಾರರ ಕೇರಳ-ಕರ್ನಾಟಕದ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ಎದುರಿಸಬೇಕಾಗಿದೆ.
ಒಟ್ಟು 19 ನಿರ್ದೇಶಕ ಸ್ಥಾನ ಪೈಕಿ ಕರ್ನಾಟಕ 10 ಮತ್ತು ಕೇರಳ 9 ಸ್ಥಾನ ಹೊಂದಿದೆ. ಕರ್ನಾಟಕದ 4 ಹಾಗೂ ಕೇರಳದ 9 ಮಂದಿ ಸೇರಿ ಒಟ್ಟು 13 ಮಂದಿ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಉಳಿದಂತೆ ಕರ್ನಾಟಕದ 6 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 8 ಮಂದಿ ಕಣದಲ್ಲಿ ಇದ್ದಾರೆ. ಕಣದಲ್ಲಿ ಇರುವ ಇಬ್ಬರನ್ನು ಹೊರತುಪಡಿಸಿದರೆ ಹಾಗೂ ಅವಿರೋಧ ಆಯ್ಕೆಯಾದವರು ಎಲ್ಲ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು. ನ.23 ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ನಡೆಯಲಿದೆ.
8 ಮಂದಿ ಕಣದಲ್ಲಿ..
ಚುನಾವಣೆ ನಡೆಯಲಿರುವ 6 ನಿರ್ದೇಶಕ ಸ್ಥಾನಕ್ಕೆ 8 ಮಂದಿ ಕಣದಲ್ಲಿದ್ದಾರೆ. ಸಹಕಾರ ಭಾರತಿ ಬೆಂಬಲಿತ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಮಹೇಶ್ ಚೌಟ, ಎ.ವಿ.ತೀರ್ಥರಾಮ, ಮುರಳೀಕೃಷ್ಣ, ಪುರುಷೋತ್ತಮ, ಎಂ.ಜಿ.ಸತ್ಯನಾರಾಯಣ ಮತ್ತು ರಾಮ ಪ್ರತೀಕ್(ಸ್ವತಂತ್ರ) ಕಣದಲ್ಲಿದ್ದಾರೆ.
ಅವಿರೋಧ ಆಯ್ಕೆಯಾದವರು..
ಕರ್ನಾಟಕದಿಂದ ಗಣೇಶ್, ರಾಘವೇಂದ್ರ ಎಂ.ಎಚ್., ವಿಶ್ವನಾಥ ಈಶ್ವರ ಹೆಗಡೆ, ಮಾಲಿನಿ ಪ್ರಸಾದ್ ಈ ನಾಲ್ಕು ಮಂದಿ ಹಾಗೂ ಕೇರಳದಿಂದ ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಸೌಮ್ಯಾ, ಗಣೇಶ್ ಕುಮಾರ್, ವೆಂಕಟ್ರಮಣ ಭಟ್, ಪದ್ಮರಾಜ್ ಪಟ್ಟಾಜೆ ಆಯ್ಕೆಯಾಗಿದ್ದಾರೆ.
15 ವರ್ಷ ಬಳಿಕ ಚುನಾವಣೆ..
2010ರಲ್ಲಿ ಕಾಂಗ್ರೆಸ್ನ ಕಳಂಜ ವಿಶ್ವನಾಥ ಶೆಟ್ಟಿ ಕಣದಲ್ಲಿದ್ದು ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಸಾಧ್ಯವಾಗದೆ ಚುನಾವಣೆ ನಡೆದಿತ್ತು. ಬಳಿಕ 15 ವರ್ಷದ ನಂತರ ಈಗ ಮತ್ತೆ ಕ್ಯಾಂಪ್ಕೋ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. 2010ಕ್ಕೂ ಮೊದಲು ಚುನಾವಣೆ ನಡೆದಿತ್ತು.