ಡ್ರಗ್ ಪೆಡ್ಲಿಂಗ್: ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರ ಬಂಧನ
ದೇರಳಕಟ್ಟೆ: ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸಹಿತ ಮೂವರನ್ನು ಉಳ್ಳಾಲ ಪೊಲೀಸರು ಕೋಟೆಕಾರು ಗ್ರಾಮದ ಬಗಂಬಿಲ ಗ್ರೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಬಂಧಿಸಿದ್ದಾರೆ.
ಮೊಹಮ್ಮದ್ ನಿಗಾರೀಸ್(22), ಅಬ್ದುಲ್ ಶಕೀಬ್ ಯಾನೆ ಶಾಕಿ (22), ಶಬೀರ್ ಅಹಮ್ಮದ್(24) ಬಂಧಿತರು.
ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರ ದುಲೆ ನಿವಾಸಿ ಮೊಹಮ್ಮದ್ ನಿಗಾರೀಸ್(22) ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಹಣಕ್ಕಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.
ನ.9 ರಂದು ಪೊಲೀಸರು ದಾಳಿ ನಡೆಸಿ ಬಗಂಬಿಲ ಗ್ರೌಂಡಿನಿಂದ ಬಂಧಿಸಿದ್ದಾರೆ.
ಬಂಧಿತನಿಂದ ಒಟ್ಟು ರೂ.59,300 ಬೆಲೆಬಾಳುವ ನಿಷೇಧಿತ 1 ಕೆ.ಜಿ 511 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಕಲಂ 8(ಸಿ), 20(ಬ) ಎನ್ ಡಿಪಿಎಸ್ ಆಕ್ಟ್ 1985 ರೀತಿಯಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ (22) ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್(24) ಎಂಬವರನ್ನು ಬಂಧಿಸಲಾಗಿದೆ.
ಚಾಲಕ ಮತ್ತು ಪೈಟಿಂಗ್ ವೃತ್ತಿಯನ್ನು ನಡೆಸುತ್ತಿದ್ದ ಇಬ್ಬರು ಸ್ನೇಹಿತರಾಗಿದ್ದು, ಶಕೀಬ್ ಬಿ.ಸಿ.ರೋಡ್ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಹಣಕ್ಕಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದರ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಗಂಡಿ ಪ್ರದೇಶದಿಂದ ಬಂಧಿಸಿದ್ದಾರೆ. ಇವರಿಂದ 420 ಗ್ರಾಂ ತೂಕದ ಗಾಂಜಾ ಮೌಲ್ಯ 6,000 ರೂ. ನಗದು ಹಾಗೂ ಮಾರಾಟಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನಿರ್ದೇಶನಂತೆ ಎಸ್.ಐ ಸಿದ್ದಪ್ಪ ನರನೂರ್ ನೇತೃತ್ವದಲ್ಲಿ ದಾಳಿ ನಡೆದಿತ್ತು.