ಎಲ್ಲೆಂದರಲ್ಲಿ ಕಸ ಬೀಸಾಡುವವರೇ ಜೋಕೆ..!: ಮೂಡುಬಿದಿರೆ ಪುರಸಭೆಯಿಂದ ಬೀಳುತ್ತೆ 10,000 ರೂ. ದಂಡ
ಮೂಡುಬಿದಿರೆ ಪುರಸಭೆಯು ಸಮಪ೯ಕ ತ್ಯಾಜ್ಯ ನಿವ೯ಹಣೆಯ ಬಗ್ಗೆ ಕಳೆದ ಹಲವು ವರುಷಗಳಿಂದ ಶ್ರಮ ವಹಿಸುತ್ತಾ ಬರುತ್ತಿದೆ. ಮನೆಗಳಲ್ಲಿ, ಉದ್ಯಮದಲ್ಲಿ, ವ್ಯಾಪಾರದಲ್ಲಿ, ವಸತಿ ಸಮುಚ್ಛಯಗಳಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ಕಡ್ಡಾಯವಾಗಿ ಹಸಿಕಸ-ಒಣಕಸ-ಅಪಾಯಕಾರಿ ಕಸವೆಂದು ವಿಂಗಡನೆ ಮಾಡಿ ಮೂರು ಬೇರೆ ಬೇರೆ ಬುಟ್ಟಿಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿ ಪುರಸಭೆಯ ಕಸ ಸಂಗ್ರಹಣಾ ವಾಹನಕ್ಕೆ ನೀಡುವಂತೆ ಸೂಚಿಸಲಾಗಿತ್ತು ಅದರಂತೆ ಕೆಲವು ವಸತಿ ಸಮುಚ್ಛಯದವರು ಹಾಗೂ ವ್ಯಾಪಾರಸ್ಥರು ನೀಡುತ್ತಾ ಬಂದಿರುತ್ತಾರೆ.
ಪೇಟೆಗಳಲ್ಲಿ ಕಸದ ರಾಶಿ ಉತ್ಪತ್ತಿಯಾಗುತ್ತಿರುವುದರ ಪುರಸಭಾ ಸದಸ್ಯರು ಪ್ರತಿ ಸಾಮಾನ್ಯ ಸಭೆಗಳಲ್ಲಿ ಪರಿಸರ ಎಂಜಿನಿಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಂತರ ಎಲ್ಲೆಲ್ಲಿ ಕಸದ ರಾಶಿ ಬೀಳುತ್ತಿದೆಯೋ ಅಲ್ಲೆಲ್ಲಾ ಸಿಸಿ ಕೆಮರಾಗಳನ್ನು ಅಳವಡಿಸಲಾಯಿತು. ಆದರೆ ಸಿಸಿ ಕೆಮಾರಾ ಅಳವಡಿಸಿದ್ದಲ್ಲಿಯೇ ಅದರ ಬುಡದಲ್ಲಿಯೇ ಕಸದ ರಾಶಿ ಹೆಚ್ಚುತ್ತಿರುವುದರಿಂದ ಪುರಸಭಾ ಸದಸ್ಯರು ಸಿಸಿ ಕೆಮರಾರ ಮೂಲಕ ನೋಡಿ ಕಸ ಹಾಕುವವರಿಗೆ ದಂಡ ವಿಧಿಸಬೇಕೆಂದು ಸಲಹೆ ನೀಡಿದ್ದರು.
ಆದರೆ ಅದು ಅಧಿಕಾರಿಗಳ ನಿಲ೯ಕ್ಷ್ಯತನದಿಂದಾಗಿ ಸಮಪ೯ಕವಾಗಿ ಕಾಯ೯ ನಿವ೯ಹಣೆಯಾಗಿರಲಿಲ್ಲ. ಆದರೆ ಇದೀಗ ಸ್ವಚ್ಛ ಮೂಡುಬಿದಿರೆಯ ನಿವ೯ಹಣೆಗಾಗಿ 5ಜನ ಕಮ್ಯೂನಿಟಿ ಮೊಬಿಲೇಸರ್ ನೇಮಿಸಲಾಗಿತ್ತು. ಅವರ ಉತ್ತಮ ಕಾಯ೯ನಿವ೯ಹಣೆಯಿಂದಾಗಿ ಇತ್ತೀಚಿನ ಕೆಲವು ಸಮಯಗಳಿಂದ ಕೆಲವು ಕಡೆಗಳಲ್ಲಿ ಕಸ ತಂದು ಹಾಕುವವರ ಮಾಹಿತಿಯು ಪುರಸಭೆಗೆ ಲಭಿಸಿದ್ದರಿಂದ ಪುರಸಭೆ ಮುಖ್ಯಾಧಿಕಾರಿ ಇಂದು ಎಂ ಅವರು 5 ಜನರಿಗೆ ರೂ 5,000, 8000, 3000 ಸಾವಿರಂತೆ ದಂಡ ವಿಧಿಸಿದ್ದರು.
ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಡುವುದು ಅನಾಗರಿಕರ ಲಕ್ಷಣ. ಮೂಡುಬಿದಿರೆ ಪರಿಸರದದಲ್ಲಿ ತ್ಯಾಜ್ಯ ಬಿಸಾಡುವವರ ಫೋಟೋ ತೆಗೆದು ದೂರವಾಣಿ ಸಂಖ್ಯೆಗೆ (9632187159) ಕಳುಹಿಸಿದರೆ ಕಸ ಬಿಸಾಡಿ ನಿಯಮ ಉಲ್ಲಂಘಿಸುವವರಿಗೆ 2019ರ ನಿಯಮಗಳನ್ವಯ ರೂ. 10,000 ದಂಡ ವಿಧಿಸಲಾಗುವುದೆಂದು ಪುರಸಭೆಯು ಪ್ರಕಟನೆಯಲ್ಲಿ ತಿಳಿಸಿದೆ.
ಶುಕ್ರವಾರ ಮೂಡುಬಿದಿರೆಯಲ್ಲಿ ನಡೆಯುವ ವಾರದ ಸಂತೆಯ ಸಮಯದಲ್ಲೂ ಸ್ವರಾಜ್ಯ ಮೈದಾನಲ್ಲಿ ಕಸದ ರಾಶಿಯೂ ಉತ್ಪತ್ತಿಯಾಗುತ್ತಿದ್ದು ಇದು ಮರುದಿನ (ಶನಿವಾರ) ನೋಡುಗರಿಗೆ ಅಸಹ್ಯವಾಗಿ ಕಾಣುತ್ತದೆ ಈ ಬಗ್ಗೆ ಸಾವ೯ಜನಿಕರು, ಮೈದಾನದಲ್ಲಿರುವ ವ್ಯಾಪಾಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮುಂದಿನ ವಾರದ ಸಂತೆಯ ಸಂದಭ೯ದಲ್ಲಿ ಬೇರೆ ಊರಿನಿಂದ ಬಂದು ವ್ಯಾಪಾರ ಮಾಡುವವರಿಗೆ ನಿಮ್ಮಲ್ಲಿ ಉತ್ಪತ್ತಿಯಾಗುವ ಕಸಕ್ಕೆ ನೀವೇ ಜವಾಬ್ದಾರರು ಅದನ್ನು ತಾವೇ ವಿಲೇ ಮಾಡಬೇಕೆಂದು ಸೂಚಿಸಲಾಗುವುದೆಂದು ಮುಖ್ಯಾಧಿಕಾರಿ ಇಂದು ಎಂ ತಿಳಿಸಿದ್ದಾರೆ.
