14ರ ವಯೋಮಿತಿಯ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್: ಆಳ್ವಾಸ್ ನ 11ವಿದ್ಯಾಥಿ೯ಗಳು ರಾಷ್ಟ್ರಮಟ್ಟಕ್ಕೆ

14ರ ವಯೋಮಿತಿಯ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್: ಆಳ್ವಾಸ್ ನ 11ವಿದ್ಯಾಥಿ೯ಗಳು ರಾಷ್ಟ್ರಮಟ್ಟಕ್ಕೆ


ಮೂಡುಬಿದಿರೆ: ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್  ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 14 ಪದಕಗಳನ್ನು ಗಳಿಸಿದ್ದಾರೆ. 11 ಮಂದಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ವಿದ್ಯಾರ್ಥಿಗಳು 12 ಚಿನ್ನ ಮತ್ತು 2 ಬೆಳ್ಳಿ ಪದಕಗಳೊಂದಿಗೆ ಒಟ್ಟು 14 ಪದಕಗಳನ್ನು ಗಳಿಸಿ, ದಕ್ಷಿಣ ಕನ್ನಡ ಜಿಲ್ಲೆ, ಬಾಲಕ ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿಯ ಜೊತೆಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಾಲಕರ ವಿಭಾಗದ 4*100ಮೀ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

ಆದರ್ಶ್ ಆರ್.-200ಮೀ (ಪ್ರಥಮ), 100ಮೀ.(ದ್ವಿತೀಯ), 4*100ಮೀ ರಿಲೇ (ಪ್ರಥಮ), ಪ್ರಣವ್ ಎಸ್ ಉದ್ದ ಜಿಗಿತ (ಪ್ರಥಮ), ಸುಭಾಷ್ ಆರ್-80ಮೀ ಹರ್ಡಲ್ಸ್ (ಪ್ರಥಮ), 400ಮೀ (ದ್ವಿತೀಯ), 4*100ಮೀ ರಿಲೇ (ಪ್ರಥಮ), ಶ್ರೀಹರಿ ಪ್ರಕಾಶ್-ಚಕ್ರ ಎಸೆತ (ದ್ವಿತೀಯ), ಕುಬೇರ ಸಿ ಎಂ - 4*100ಮೀ ರಿಲೇ (ಪ್ರಥಮ), ವೈಭವ್ - 4*100ಮೀ ರಿಲೇ (ಪ್ರಥಮ), ಮಾಲ ಟಿ ಆರ್-100ಮೀ (ಪ್ರಥಮ), ಗೀತಾಂಜಲಿ - 4*100ಮೀ ರಿಲೇ (ಪ್ರಥಮ), ಎಂ ಆರ್ ಭವಿಷ್ಯ - 4*100ಮೀ ರಿಲೇ (ಪ್ರಥಮ), ವೈಷ್ಣವಿ - 4*100ಮೀ ರಿಲೇ (ಪ್ರಥಮ), ವರ್ಷಿಣಿ - 4*100ಮೀ ರಿಲೇಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. 

ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article