ಯೆನೆಪೋಯ ಎಂಜಿನಿಯರಿಂಗ್ ಕಾಲೇಜಿನ ವಾಷಿ೯ಕ ಕ್ರೀಡಾಕೂಟ
Saturday, November 22, 2025
ಮೂಡುಬಿದಿರೆ: ಕ್ರೀಡೆಯು ನಮಗೆ ಸಮಯದ ನಿರ್ವಹಣೆಯನ್ನು, ಸರಿಯಾದ ವೇಳೆಯಲ್ಲಿ ಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳುವಂತಹ ಅನೇಕ ಬದುಕಿನ ಅವಕಾಶಗಳನ್ನು ನೀಡುತ್ತದೆ ಎಂದು ಕಬಡ್ಡಿ ರಾಷ್ಟ್ರೀಯ ಆಟಗಾರ್ತಿ ದೀಕ್ಷಾ ಕುಮಾರಿ ಹೇಳಿದರು.
ಅವರು ಸ್ವರಾಜ್ಯ ಮೈದಾನದಲ್ಲಿ ಶನಿವಾರ ತೋಡಾರಿನ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಮತ್ತು ಕ್ರೀಡೆಗಳನ್ನು ಸಮಾನವಾಗಿ, ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸುವ ಅಗತ್ಯ ಕ್ರೀಡಾಳುಗಳಿಗೆ ಇದೆ ಎಂದರು.
ಯೆನೇಪೋಯ ವಿವಿಯ ಅಪರೇಷನ್ ವಿಭಾಗದ ನಿರ್ದೇಶಕ ಅಬ್ದುಲ್ಲಾ ಜಾವೇದ್, ಉಪ ಪ್ರಾಂಶುಪಾಲ ಪ್ರಭಾಕರ ಬಿ.ಕೆ., ಕ್ಯಾಂಪಸ್ ಆಡಳಿತಾಧಿಕಾರಿ ಮಹಮ್ಮದ್ ಶಾಹಿದ್, ಕ್ರೀಡಾ ನಿರ್ದೇಶಕ ಲೋಕೇಶ್ ಮತ್ತಿತರರಿದ್ದರು.
ವಿದ್ಯಾರ್ಥಿಗಳಾದ ವಾಂಚಿತಾ ಸ್ವಾಗತಿಸಿದರು. ತಾಸ್ಮಿಯಾ ವಾರ್ಷಿಕ ಕ್ರೀಡಾಕೂಟದ ವರದಿ ವಾಚಿಸಿದರು. ಇಬ್ರಿಸಾನ್ ನಿರೂಪಿಸಿದರು. ಸಂಜು ವಂದಿಸಿದರು.
ವಾರ್ಷಿಕ ಕ್ರೀಡಾಕೂಟದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 400ಕ್ಕೂ ಅಧಿಕ ಕ್ರೀಡಾಪಟುಗಳು ಕ್ರೀಡಾಪಟುಗಳಾಗಿ ಭಾಗವಹಿಸಿದರು.
ಪಥ ಸಂಚಲನದಲ್ಲಿ ಇಸಿಇ ವಿಭಾಗವುಪ್ರಥಮ ಬಹುಮಾನವನ್ನು ಪಡೆದುಕೊಂಡಿತು.ಶಿರ್ತಾಡಿ ಭುವನ ಜ್ಯೋತಿ ಸಂಸ್ಥೆಯ ಬ್ಯಾಂಡ್ ಸೆಟ್ ತಂಡವನ್ನು ಗೌರವಿಸಲಾಯಿತು.
